ವಾಷಿಂಗ್ಟನ್,ಮೇ 6: ಚೀನದಲ್ಲಿ 30 ಲಕ್ಷ ಮುಸ್ಲಿಮರು ಕಾನ್ಸಂಟ್ರೇಶನ್ ಶಿಬಿರದಲ್ಲಿದ್ದಾರೆ ಎಂದು ಅಮೆರಿಕ ಆರೋಪಿಸಿದೆ. ಅಮೆರಿಕದ ರಕ್ಷಣಾ ಸಚಿವಾಲಯದ ಏಷ್ಯನ್ ವಿಷಯಗಳನ್ನು ತೀರ್ಮಾನಿಸುವ ರಾಂಡಲ್ ಶ್ರೀವರ್ ಚೀನದ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. ಚೀನದ ವೆಕೇಶನಲ್ ವಿದ್ಯಾಭ್ಯಾಸ ತರಬೇತಿ ಕೇಂದ್ರಗಳು ಮುಸ್ಲಿಂ ಭಯೋತ್ಪಾದನೆ ಬೆದರಿಕೆಯನ್ನು ಮೀರಿ ನಿಲ್ಲಲಿಕ್ಕಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಆರೋಪಿಸಿದರು. ಈ ಹಿಂದೆ ಚೀನದ ಕಾನ್ಸಂಟ್ರೇಶನ್ ಶಿಬಿರದಲ್ಲಿ ಬಂದಿಯಾಗಿದ್ದವರಲ್ಲಿ ಕೆಲವರು ರಾಯಿಟರ್ಸ್ಗೆ ಮಾಹಿತಿ ನೀಡಿದ ನಂತರ ವಿವಾದ ಸೃಷ್ಟಿಯಾಗಿತ್ತು.
ಭದ್ರತಾ ಪಡೆಯನ್ನು ಉಪಯೊಗಿಸಿ ಅಲ್ಲಿನ ಕಮ್ಯುನಿಸ್ಟ್ ಪಾರ್ಟಿ ಅಲ್ಲಿನ ಮುಸ್ಲಿಮರನ್ನು ಇಂಥ ಶಿಬಿರಕ್ಕೆ ಬಲವಂತದಿಂದ ಸೇರಿಸುತ್ತಿದೆ. ನಾಝಿ ಜರ್ಮನಿಯಂತೆ ಚೀನದಲ್ಲಿ ಮುಸ್ಲಿಮರ ವಿರುದ್ಧ ನಡೆದುಕೊಳ್ಳಲಾಗಿಗುತ್ತಿದೆ ಎಂದು ಅವರು ಹೇಳಿದರು. ಚೀನದಲ್ಲಿ ಒಂದು ಕೋಟಿ ಮುಸ್ಲಿಮರಿದ್ದಾರೆ. ಇವರಲ್ಲಿ 30 ಲಕ್ಷ ಮಂದಿ ಶಿಬಿರದಲ್ಲಿದ್ದಾರೆ ಎಂದು ರಾಂಡಲ್ ಶ್ರೀವರ್ಹೇಳಿದರು. ಇದೇವೇಳೆ ಅಮೆರಿಕದ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ 1930ನ್ನು ನೆನಪಿಸುವ ಪ್ರವೃತ್ತಿಯನ್ನು ಚೀನ ತೋರಿಸುತ್ತಿದೆ ಎಂದು ಆರೋಪಿಸಿದರು. ಆದರೆ ಸಿಂಜಿಯಾಂಗ್ ಗವರ್ನರ್ ಇದು ಕಾನ್ಸಂಟ್ರೇಶನ್ ಕ್ಯಾಂಪ್ ಅಲ್ಲ, ಬೋರ್ಡಿಂಗ್ ಸ್ಕೂಲ್ ಎನ್ನುತ್ತಾರೆ. ಕಳದೆ ಆಗಸ್ಟ್ನಲ್ಲಿ ಚೀನದ ಕಾನ್ಸಂಟ್ರೇಶನ್ ಶಿಬಿರಗಳಲ್ಲಿ ಹತ್ತು ಲಕ್ಷಕ್ಕೂ ಮುಸ್ಲಿಮರು ಇದ್ದಾರೆ ಎಂದು ವಿಶ್ವಸಂಸ್ಥೆಯೇ ದೃಢಪಡಿಸಿತ್ತು. ಇವರನ್ನು ಬಿಡುಗಡೆಗೊಳಿಸಲು ಟರ್ಕಿ ಒತ್ತಾಯಿಸಿದೆ.












