ದೆಹಲಿಯ ನ್ಯಾಯಾಧೀಶೆಯಾಗಲಿರುವ ಅನಮ್ ರಯೀಸ್ ಖಾನ್

0
1038

ಸನ್ಮಾರ್ಗ ವಾರ್ತೆ

ದೆಹಲಿ ಜುಡಿಶಿಯಲ್ ಸರ್ವಿಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಲಿಘರ್ ಮುಸ್ಲಿಂ ಯುನಿವರ್ಸಿಟಿಯ ವಿದ್ಯಾರ್ಥಿನಿ ಅನಮ್ ರಯೀಸ್ ಖಾನ್ ಇದೀಗ ದೆಹಲಿಯ ನ್ಯಾಯಾದೀಶೆಯಾಗುವುದಕ್ಕೆ ಸಜ್ಜಾಗಿದ್ದಾರೆ.

2015ರಲ್ಲಿ ಅಲಿಘರ್ ಮುಸ್ಲಿಂ ಯುನಿವರ್ಸಿಟಿಯಿಂದ ಬಿ ಎ ಎಲ್ ಎಲ್ ಬಿ ಪದವಿಯನ್ನು ಪಡೆದ ಇವರು 2016ರಲ್ಲಿ ದೆಹಲಿಯ ನ್ಯಾಷನಲ್ ಲಾ ಯುನಿವರ್ಸಿಟಿಯಿಂದ ಎಲ್ ಎಲ್ ಎಮ್ ಪದವಿಯನ್ನು ಪಡೆದರು. ದೆಹಲಿ ಯುನಿವರ್ಸಿಟಿಯಿಂದ ಚಿನ್ನದ ಪದಕದ ಮೂಲಕ ಪದವಿ ಪಡೆದಿದ್ದರು.

ಯುಜಿಸಿ ನೆಟ್ ಪರೀಕ್ಷೆಯಲ್ಲಿ ಪಾಸಾದ ಈಕೆ 2017ರಲ್ಲಿ ದೆಹಲಿ ಬಾರ್ ಕೌನ್ಸಿಲ್ ಗೆ ತೇರ್ಗಡೆಯಾದರು. ಬಳಿಕ ಆಸ್ಟ್ರೇಲಿಯಾದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ದುಡಿಯುತ್ತಿರುವ ತನ್ನ ಗಂಡನನ್ನು ಸೇರಿಕೊಂಡರು. ಆದರೆ ನ್ಯಾಯಾಂಗ ಕ್ಷೇತ್ರದಲ್ಲಿ ದುಡಿಯಬೇಕೆಂಬ ತನ್ನ ಮಹದಾಸೆಯನ್ನು ಅವರು ಬಿಟ್ಟುಕೊಡಲಿಲ್ಲ. ಆಸ್ಟ್ರೇಲಿಯಾದಲ್ಲಿ ಇದ್ದುಕೊಂಡೇ ಸತತ ಪ್ರಯತ್ನ ಪಟ್ಟ ಅವರು ಇದೀಗ ನ್ಯಾಯಾಧೀಶೆಯಾಗುವ ಸರ್ವಸಿದ್ಧತೆಯಲ್ಲೂ ಇದ್ದಾರೆ.