ಬಿಜೆಪಿ ಅಭ್ಯರ್ಥಿಯನ್ನು ಚಪ್ಪಲಿ ಎಸೆದು ಓಡಿಸಿದ ಹರಿಯಾಣ ರೈತರು

0
283

ಸನ್ಮಾರ್ಗ ವಾರ್ತೆ

ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಹರಿಯಾಣದಲ್ಲಿ ಬಿಜೆಪಿ ರೈತರಿಂದ ಭಾರಿ ವಿರೋಧವನ್ನು ಎದುರಿಸುತ್ತಿದೆ. ಚುನಾವಣಾ ಪ್ರಚಾರಕ್ಕೆ ಬಂದ ಬಿಜೆಪಿ ಅಭ್ಯರ್ಥಿಯನ್ನು ರೈತರು ಓಡಿಸಿದ್ದಾರೆ. ಚಪ್ಪಲಿ ಎಸೆದಿದ್ದಾರೆ. ರೈತ ಪ್ರತಿಭಟನೆಯನ್ನು ಕಡೆಗಣಿಸಿದ ಬಿಜೆಪಿಗೆ ಈಗ ರೈತರು ಪ್ರತಿ ಉತ್ತರವನ್ನು ನೀಡತೊಡಗಿದ್ದಾರೆ.

ರಾದಿಯ ಮತ್ತು ಹಿಸಾರ್ ಎಂಬ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಈ ಪ್ರತಿರೋಧ ಎದುರಾಗಿದೆ. ರಾದಿಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಸುನಿತಾ ದುಗ್ಗಲ್ ಅವರು ಚುನಾವಣಾ ಪ್ರಚಾರಕ್ಕೆಂದು ಕ್ಷೇತ್ರಕ್ಕೆ ಬಂದಾಗ ರೈತರು ವಿರೋಧ ಒಡ್ಡಿದ್ದಾರೆ. ಬಳಿಕ ಅವರನ್ನು ಓಡಿಸಿದ್ದಾರೆ.

ಶಂಭು ಮತ್ತು ಕನೋರಿ ಗಡಿ ಪ್ರದೇಶದಲ್ಲಿ ರೈತರು ನಡೆಸ್ತಾ ಇರುವ ಹೋರಾಟವನ್ನು ನ್ಯಾಯಯುತ ಎಂದು ನೀವು ಒಪ್ಪು ಬೇಕು, ಹಾಗೆಯೇ ಕನೋರಿ ಗಡಿಯಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಪಂಜಾಬಿನ ರೈತ ಶುಭಕರನ್ ಸಿಂಗ್ ಅವರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಭಾರತೀಯ ಕಿಸಾನ್ ಯೂನಿಯನ್ ನ ಕಾರ್ಯಕರ್ತರು ಸುನೀತ ದುಗ್ಗಲ್ ರಲ್ಲಿ ಆಗ್ರಹಿಸಿದರು. ಇದಕ್ಕೆ ದುಗ್ಗಲ್ ಸ್ಪಷ್ಟವಾಗಿ ಪ್ರತಿಕ್ರಿಯಿಸದೆ ಇದ್ದಾಗ ಅವರು ಸಿಡಿದರು. ಇದರಿಂದ ಭದ್ರತಾ ಅಧಿಕಾರಿಗಳು ಸುನೀತ ಅವರನ್ನು ಸುರಕ್ಷಿತವಾಗಿ ಬೇರೆಡೆಗೆ ಕೊಂಡು ಹೋದರು.

ಹಿಸ್ಸಾರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಡಾ| ಕಮಲ್ ಗುಪ್ತ ಅವರಿಗೂ ರೈತರಿಂದ ಇದೇ ರೀತಿಯ ಪ್ರತಿರೋಧ ಎದುರಾಯಿತು. ಇವರು ಪ್ರಚಾರ ಸಭೆಯಲ್ಲಿ ಭಾಷಣ ಮಾಡುತ್ತಿದ್ದಾಗ ಜನರು ಅವರಡೆಗೆ ಚಪ್ಪಲಿ ಎಸೆದರು. ಈ ಬಾರಿ ಹರಿಯಾಣದಲ್ಲಿ ಬಿಜೆಪಿಗೆ ನಿರೀಕ್ಷಿತ ಗೆಲುವು ಕಷ್ಟ ಸಾಧ್ಯ ಎಂಬುದನ್ನು ಹರಿಯಾಣದ ವರದಿಗಳು ತಿಳಿಸುತ್ತಿವೆ.