ಹಿಮಾಚಲ ಪ್ರದೇಶ: ಶಿವಲಿಂಗ ಧ್ವಂಸಕ್ಕೆ ಮುಸ್ಲಿಮರು ಕಾರಣವೇ? ಫ್ಯಾಕ್ಟ್ ಚೆಕ್ ಹೇಳಿದ್ದೇನು?

0
319

ಸನ್ಮಾರ್ಗ ವಾರ್ತೆ

2024ರ ಸೆಪ್ಟೆಂಬರ್ 27ರ ಶುಕ್ರವಾರದಂದು, ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ನಾಗ್ರೋಟಾದಲ್ಲಿರುವ ದೇವಸ್ಥಾನದ ಧ್ವಂಸಗೊಳಿಸಿರುವುದು ದೊಡ್ಡ ಸುದ್ದಿಯಾಗಿತ್ತು.

ಹಿಮಾಚಲಪ್ರದೇಶದಲ್ಲಿ ವಿಶೇಷವಾಗಿ ಶಿಮ್ಲಾದಲ್ಲಿ ನಡೆಯುತ್ತಿರುವ ಸಾಮುದಾಯಿಕ ಬಿಕ್ಕಟ್ಟಿನ ಮಧ್ಯೆ, ವಿಡಿಯೋದಲ್ಲಿ ದೇವಸ್ಥಾನದ ಒಳಗಿನ ಧ್ವಂಸಗೊಂಡ ಶಿವಲಿಂಗವನ್ನು ತೋರಿಸಲಾಗಿದೆ, ಮಾತ್ರವಲ್ಲದೆ ಇದು ದುಷ್ಕರ್ಮಿಗಳ ಕೃತ್ಯವೆಂದು ವಿವರಣೆ ಕೊಡಲಾಗಿದೆ. ಪೊಲೀಸ್ ಅಧಿಕಾರಿಯನ್ನು ತನಿಖೆ ಕುರಿತು ಕೇಳಿದಾಗ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಉತ್ತರಿಸಿದ್ದರು.

ಈ ವಿಡಿಯೋವನ್ನು ಹಂಚಿಕೊಳ್ಳುವವರು ಹಿಂದೂ ದೇವಸ್ಥಾನ ಧ್ವಂಸಗೊಳ್ಳಲು ರಾಜ್ಯದ ‘ಜನಸಾಂಖ್ಯಾ ಬದಲಾವಣೆಯ ಪರಿಣಾಮ ಎಂದು ಆರೋಪ ಹೊರಿಸಿದ್ದಾರೆ.

X (Twitter) ಬಳಕೆದಾರ ರೌಶನ್ ಸಿಂಗ್ (@MrSinha_), ಒಬ್ಬ ಬಲಪಂಥೀಯ ಪ್ರಭಾವಶಾಲಿ ಈ ಬಗ್ಗೆ ತಪ್ಪುಮಾಹಿತಿಯನ್ನು ಹಬ್ಬಿಸಿವವರಾಗಿದ್ದು, ಈ ವಿಡಿಯೋ ಕ್ಲಿಪ್ ಅನ್ನು ಅವರು ಟ್ವೀಟ್ ಮಾಡಿದ್ದಾರೆ. ‘ಹಿಮಾಚಲ ಪ್ರದೇಶ: ದುಷ್ಕರ್ಮಿಗಳು ಶಿವಲಿಂಗವನ್ನು ಧ್ವಂಸಗೊಳಿಸಿದ್ದಾರೆ. ದೇವಭೂಮಿ ಹಿಮಾಚಲ ಪ್ರದೇಶದಲ್ಲಿ ಇಂತಹ ಸುದ್ದಿ ಸಾಮಾನ್ಯವಾಗಿರಲಿಲ್ಲ, ಆದರೆ ಈಗ ಇದು ಸಾಮಾನ್ಯವಾಗಿದೆ. ಜನಸಂಖ್ಯಾ ಬದಲಾವಣೆ ವಾಸ್ತವ ಮತ್ತು ಭಯಾನಕವಾಗಿದೆ..'” ಎಂದವರು ಬರೆದಿದ್ದಾರೆ.

https://x.com/MrSinha_/status/1839581130787307935?t=9Hz7IEXezQzjinReAgTPZg&s=19

“ಈ ಟ್ವೀಟ್ 3.4 ಲಕ್ಷಕ್ಕಿಂತ ಹೆಚ್ಚು ವೀಕ್ಷಣೆಗಳನ್ನು ಮತ್ತು 6,300 ರೀಟ್ವೀಟ್‌ಗಳನ್ನು ವರದಿ ಬರೆಯುವ ಸಮಯಕ್ಕೆ ಪಡೆದುಕೊಂಡಿದೆ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.
ಬಿಜೆಪಿ ನಾಯಕ ಮತ್ತು ಅಸ್ಸಾಂ ನಗರ ವ್ಯವಹಾರಗಳ ಸಚಿವ ಅಶೋಕ್ ಸಿಂಘಾಲ್ ಕೂಡ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ.

ಜನಸಂಖ್ಯಾ ಬದಲಾವಣೆ ಮತ್ತು ದೇವರ ಭೂಮಿಗೆ ಕಣ್ಣು ಹಾಕಿರುವ ದೈತರು, ರಾಕ್ಷಸರು ಮುಂತಾದ ಘೋಷಣೆಗಳು ಮುಸ್ಲಿಂ ಸಮುದಾಯದ ವಿರುದ್ಧ ಗುರಿ, ನಿಂದನೆ ಮತ್ತು ಹೆಚ್ಚಿನ ಸಂಘರ್ಷಕ್ಕೆ ಕಾರಣವಾಗಲಿದೆ. ಶಿಮ್ಲಾದಲ್ಲಿನ ಇತ್ತೀಚಿನ ಟ್ವೀಟ್‌ನಲ್ಲಿ 35 ಮುಸ್ಲಿಂ ವ್ಯಾಪಾರಸ್ಥರು ನಕಲಿ ಆಧಾರ್ ಕಾರ್ಡುಗಳನ್ನು ಹೊಂದಿದ್ದರೆಂದು ತಪ್ಪು ವರದಿ ಮಾಡಿದ್ದರು. ಇದನ್ನು ‘ಜನಸಾಂಖ್ಯಾ ಬದಲಾವಣೆ’ (demographic change) ಎಂದು ಉಲ್ಲೇಖಿಸಲಾಗಿತ್ತು. ಆದರೆ ಈ ಆರೋಪ ಸುಳ್ಳು ಮತ್ತು ಅಸತ್ಯವಾಗಿತ್ತು. ಈ ಸಂಬಂಧಿತವಾದ ‘ಆಲ್ಟ್ ನ್ಯೂಸ್’ ಫ್ಯಾಕ್ಟ್ ಚೆಕ್ ಪರಿಶೀಲಿಸಬಹುದು.

https://x.com/SonOfBharat7/status/1839628639899635900?t=zsgCrgmvvREx3lAMsSkQow&s=19

ದೇವಾಲಯ ಧ್ವಂಸಗೊಂಡ ಸುದ್ದಿಯು ವೈರಲ್ ಆದ ನಂತರ, ಹಲವು ಹಿಂದುತ್ವ ಸಂಘಟನೆಗಳು ಗಾಂಧಿ ಮೈದಾನದಲ್ಲಿ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದವು. 2024ರ ಸೆಪ್ಟೆಂಬರ್ 27ರಂದು ‘ನ್ಯೂಸ್24 ಹಿಮಾಚಲ್’ನ ಅಧಿಕೃತ ಫೇಸ್ಬುಕ್ ಪುಟವು ಈ ಪ್ರತಿಭಟನೆಯನ್ನು ನೇರ ಪ್ರಸಾರ ಮಾಡಿತು. ನಾಗ್ರೋಟಾದ ಶಾಸಕರಾದ ರಘುಬೀರ್ ಸಿಂಗ್ ಬಾಲಿ ಅವರ ಉಪಸ್ಥಿತಿಯಲ್ಲಿ ಪ್ರತಿಭಟನಾಕಾರರು ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದರು.

https://x.com/TheAshokSinghal/status/1840008452535423108?t=-yGP1w0YeozPJIIxlSGLMw&s=19

ಫ್ಯಾಕ್ಟ್ ಚೆಕ್

ಈ ವಿಷಯದಲ್ಲಿ, ಹಿಮಾಚಲ ಪ್ರದೇಶದ ಪೊಲೀಸರು ನಿರ್ಣಾಯಕ ಹೇಳಿಕೆ ನೀಡಿದ್ದಾರೆ. ವಿಡಿಯೋ ಹೇಳಿಕೆಯಲ್ಲಿ ಕಾಂಗ್ರಾ ಡಿಎಸ್‌ಪಿ ಅಂಕಿತ್ ಶರ್ಮಾ ಹೇಳುತ್ತಾರೆ: ‘ಬಿಎನ್‌ಎಸ್ 298 ಅಡಿಯಲ್ಲಿ ನಾಗ್ರೋಟಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ ಬಳಿಕ, 35 ವರ್ಷದ ನಿಶಾ ದೇವಿ ಎಂಬ ಮಹಿಳೆ ನಾಗ್ರೋಟಾದ ದೇವಸ್ಥಾನದಲ್ಲಿ ಶಿವಲಿಂಗ ಧ್ವಂಸಗೊಳಿಸಿದ್ದಾಳೆ ಎಂದು ಪೊಲೀಸರು ಕಂಡು ಹಿಡಿದರು. ಈ ಕೃತ್ಯವು ಬೆಳಗಿನ 3:30 ರಿಂದ 4:00 ಗಂಟೆಗಳ ನಡುವೆ ನಡೆದಿದ್ದು, ಬಳಿಕ ಸುಳಿವುಗಳನ್ನು ಮುಂದಿಟ್ಟು ಪೊಲೀಸರು ನಿಶಾ ದೇವಿ ಎಂಬ ಮಹಿಳೆಯನ್ನು ಬಂಧಿಸಿದರು.

ಈ ಮಹಿಳೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಸಮಾನ ಆರೋಪಗಳನ್ನು ಎದುರಿಸುತ್ತಿದ್ದಾಳೆ. 2020ರಲ್ಲಿ, ಧರ್ಮಶಾಲಾದ ಫತೇಹ್ಪುರದ ದೇವಸ್ಥಾನದಲ್ಲಿ ಅವಳು ಶಿವಲಿಂಗವನ್ನು ಹಾನಿಗೊಳಿಸಿದ್ದಳು. ಈಕೆ ದೇವಾಲಯಗಳಲ್ಲಿ ಮೂರ್ತಿಗಳನ್ನು ಧ್ವಂಸಗೊಳಿಸುತ್ತಲೇ ಇದ್ದಾಳೆ. ಇದೇ ಸಮಯದಲ್ಲಿ, ಈಕೆ ಮಾನಸಿಕ ಸ್ಥಿಮಿತ ಕಳಕೊಂಡಿದ್ದಾಳೆ ಎಂದು ಪೊಲೀಸರು ಸ್ಪಷ್ಟ ಪಡಿಸಿದ್ದಾರೆ. ಕಾನೂನಿನ ನಿಯಮಾನುಸಾರ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.

https://www.facebook.com/share/v/govEP7dSTY2ac8C7/?mibextid=oFDknk