ಇಸ್ತಾಂಬುಲ್‍ನಲ್ಲಿ ಟರ್ಕಿಯ ಅತಿದೊಡ್ಡ ಮಸೀದಿ ಉದ್ಘಾಟನೆ

0
764

ಇಸ್ತಾಂಬುಲ್, ಮೇ 7: ಟರ್ಕಿಯ ಅತಿದೊಡ್ಡ ಮಸೀದಿಯನ್ನು ಇಸ್ತಾಂಬುಲ್‍ನಲ್ಲಿ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್ ಉದ್ಘಾಟಿಸಿದರು. ಏಕ ಕಾಲದಲ್ಲಿ 63000 ಮಂದಿಗೆ ನಮಾಝ್ ನಿರ್ವಹಿಸುವ ಅವಕಾಶ ಇದರಲ್ಲಿದೆ. ಶುಕ್ರವಾರ ಜುಮಾ ನಮಾಝ್‍ಗೆ ಅನುಕೂಲವಾಗುವಂತೆ ಮಸೀದಿಯನ್ನು ತರೆಯಲಾಗಿದೆ. ಆರು ವರ್ಷದಲ್ಲಿ ನಿರ್ಮಾಣ ಕಾರ್ಯ ನಡೆಯಿತು. 1998ರಲ್ಲಿ ಟರ್ಕಿಯ ದಕ್ಷಿಣ ಪ್ರಾಂತದಲ್ಲಿ ನಿರ್ಮಾಣಗೊಂಡು ಆರಂಭವಾದ ಸಬಾನ್‍ಕಿ ಸೆಂಟ್ರಲ್ ಮಸೀದಿ ಈವರೆಗಿನ ಟರ್ಕಿಯ ಅತಿದೊಡ್ಡ ಮಸೀದಿ ಆಗಿತ್ತು. ಇಲ್ಲಿ 28500 ಮಂದಿ ನಮಾಝ್ ನಿರ್ವಹಿಸುವ ಸೌಕರ್ಯವಿದೆ. ಆರಾಧನಾಲಯಗಳ ವಿರುದ್ಧ ನಡೆಯುತ್ತಿರುವ ದಾಳಿಗಳನ್ನು ಖಂಡಿಸುವುದಾಗಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಉರ್ದುಗಾನ್ ಹೇಳಿದರು. ಧರ್ಮದ ಹೆಸರಿನಲ್ಲಿ ನಿರಪರಾಧಿಗಳನ್ನು ಗುಂಡು ಹಾರಿಸಿ ಕೊಲ್ಲುವುದು ಜಿಹಾದ್ ಅಲ್ಲ  ಅದು ಭಯೋತ್ಪಾದನೆಯೆಂದು ಅವರು ಹೇಳಿದರು.