ನಿರಾಶ್ರಿತರ ಆಶ್ರಯ ತಾಣವಾಗಿದ್ದ ಗಾಝಾದ ಮಸೀದಿ ಮೇಲೆ ಇಸ್ರೇಲ್ ದಾಳಿ; 21 ಮಂದಿ ಸಾವು

0
113

ಸನ್ಮಾರ್ಗ ವಾರ್ತೆ

ಪೆಲೆಸ್ತೀನ್‌ನ ಗಾಝಾ ಪಟ್ಟಿಯಲ್ಲಿ ಇಸ್ರೇಲ್ ತನ್ನ ಕ್ರೌರ್ಯವನ್ನು ಮುಂದುವರೆಸಿದೆ. ಮಧ್ಯ ಗಾಝಾದಲ್ಲಿರುವ ಮಸೀದಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ.

ಭಾನುವಾರ, ಇಸ್ರೇಲ್ ಎಸಗಿರುವ ಕ್ರೌರ್ಯದ ಬಗ್ಗೆ ಪೆಲೆಸ್ತೀನ್ ವೈದ್ಯಕೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಧ್ಯ ಗಾಝಾದ ದೇರ್ ಅಲ್-ಬಲಾಹ್ ಪಟ್ಟಣದಲ್ಲಿರುವ ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆಯ ಬಳಿ ಇರುವ ಮಸೀದಿಯಲ್ಲಿ ನಿರಾಶ್ರಿತ ಜನರಿಗೆ ಆಶ್ರಯ ನೀಡಲಾಗಿತ್ತು.

ಆ ಮಸೀದಿಯ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಘಟನೆಯಲ್ಲಿ 21 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆಯ ವಕ್ತಾರ ಮಹ್ಮದ್ ಬಾಕ್ಸಲ್ ತಿಳಿಸಿದ್ದಾರೆ.

ಪೆಲೆಸ್ತೀನ್ ಆರೋಗ್ಯ ಸಚಿವಾಲಯದ ಪ್ರಕಾರ, ಪೆಲೆಸ್ತೀನ್ ಮೇಲೆ ಇಸ್ರೇಲ್ ಎಸಗುತ್ತಿರುವ ಕ್ರೌರ್ಯದಿಂದ ಇದೂವರೆಗೆ 42,000 ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ.