ಜನಾದೇಶ ವಿರುದ್ಧ ಕುತಂತ್ರ ಬೇಡ; ಕೇಂದ್ರ ಸರಕಾರಕ್ಕೆ ಒಮರ್ ಅಬ್ದುಲ್ಲಾ

0
192

ಸನ್ಮಾರ್ಗ ವಾರ್ತೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಜನರ ತೀರ್ಪಿನ ವಿರುದ್ಧ ಯಾವುದೇ ಚೆಲ್ಲಾಟ ಆಡಬಾರದು. ಎಲ್ಲಾ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಇರಬೇಕು. ಆದ್ದರಿಂದ ಕೇಂದ್ರ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಯಾವುದೇ ಕುತಂತ್ರಗಳಲ್ಲಿ ತೊಡಗಬಾರದು ಎಂದು ಪತ್ರಕರ್ತರೊಂದಿಗೆ ಮಾತನಾಡುತ್ತಾ ನ್ಯಾಷನಲ್ ಕಾನ್ಸರೆನ್ಸ್ (ಎನ್‌ಸಿ) ಉಪಾಧ್ಯಕ್ಷ ಒಮ‌ರ್ ಅಬ್ದುಲ್ಲಾ ಆಗ್ರಹಿಸಿದ್ದಾರೆ.

ಯಾಕೆಂದರೆ ಮೊದಲ ಹಂತದಲ್ಲಿ ಬಿಜೆಪಿ ಮತ್ತು ಇತರ ಪ್ರತಿಸ್ಪರ್ಧಿಗಳಿಗಿಂತ ಟ್ರೆಂಡ್ ನಮ್ಮ ಮೈತ್ರಿಕೂಟದ ಪರವಾಗಿದೆ. ಈ ನಿಟ್ಟಿನಲ್ಲಿ ಜನಾದೇಶಕ್ಕೆ ಯಾವುದೇ ತಡೆ ಇರಬಾರದು. ಜನಾದೇಶ ಬಿಜೆಪಿ ವಿರುದ್ಧವಾಗಿದ್ದರೆ ಬಿಜೆಪಿ ಯಾವುದೇ ಕುತಂತ್ರಕ್ಕೆ ಕೈ ಹಾಕಬಾರದು ಎಂದು ಅಬ್ದುಲ್ಲಾ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಮಗೆ ಗೆಲುವಿನ ಕುರಿತು ಅಪಾರ ವಿಶ್ವಾಸ ಇದೆ. ಬಾಕಿ ದೇವರಿಗೆ ಬಿಟ್ಟದ್ದು, ಮುಂದೆ ಜನಾದೇಶ ಸ್ಪಷ್ಟವಾಗಿ ಮುಂದೆ ಬರಲಿದೆ ಎಂದು ಸುದ್ದಿಗಾರರೊಂದಿಗೆ ಹೇಳಿದರು.