ದೇಶ ವಿಭಜನೆಯ ವೇಳೆ ಸಿಖ್ ಕುಟುಂಬದ ಪಾಲಾಗಿದ್ದ ಮುಸ್ಲಿಂ ಬಾಲಕ ಈಗ ಮಹೀಂದರ್ ಸಿಂಗ್ ಗಿಲ್: ರೋಚಕ ಘಟನೆ ಬಿಚ್ಚಿಟ್ಟ ಜೆ ಎನ್ ಯು ಪ್ರೊಫೆಸರ್

0
235

ಸನ್ಮಾರ್ಗ ವಾರ್ತೆ

1947ರ ದೇಶ ವಿಭಜನೆ ಎಂಥ ಭೀಕರ ಪರಿಸ್ಥಿತಿಗೆ ಸಾಕ್ಷಿಯಾಗಿರಬಹುದು ಅನ್ನೋದಕ್ಕೆ ಮೊಹಮ್ಮದ್ ಶಾಫಿ ಎಂಬ ಈ ಪ್ರಕರಣ ಅತ್ಯಂತ ಸ್ಪಷ್ಟ ಉದಾಹರಣೆಯಾಗಿದೆ. ಪಶ್ಚಿಮ ಪಂಜಾಬಿನಲ್ಲಿದ್ದ ಈ ಮೊಹಮ್ಮದ್ ಶಾಫಿ ಕುಟುಂಬ ವಿಭಜನೆಯ ಕಾರಣಕ್ಕಾಗಿ ಪಾಕಿಸ್ತಾನದ ಪಾಲಾಯಿತು. ಆದರೆ 10 ವರ್ಷದ ಬಾಲಕ ಮಹಮ್ಮದ್ ಶಾಫಿ ಆ ಕಾಲದ ಪರಿಸ್ಥಿತಿಯ ಸುಳಿಗೆ ಸಿಲುಕಿ ಪಂಜಾಬಿನಲ್ಲೆ ಉಳಿದು ಹೋದ. ಇದೀಗ ಈ ಮಹಮ್ಮದ್ ಶಾಫಿಗೆ 77 ವರ್ಷ. ಹೆಸರು ಮಹೇಂದರ್ ಸಿಂಗ್ ಗಿಲ್. ಇದೀಗ ಈ ಮಹಮ್ಮದ್ ಶಾಫಿಯ ಕುಟುಂಬವನ್ನು ಪಾಕಿಸ್ತಾನದಲ್ಲಿ ಪತ್ತೆ ಹಚ್ಚಲಾಗಿದ್ದು ಅವರನ್ನು ಜೊತೆಗೂಡಿಸಲಾಗುತ್ತಿದೆ.

ಈ ಬಾಲಕ ಮಹಮ್ಮದ್ ಶಾಫಿಯನ್ನು ಸಿಖ್ ಕುಟುಂಬ ದತ್ತು ಪಡಕೊಂಡಿದೆ ಮತ್ತು ಮಹೀಂದರ್ ಸಿಂಗ್ ಗಿಲ್ ಎಂದು ಹೆಸರಿಟ್ಟಿದೆ. ಜೆ ಎನ್ ಯು ಪ್ರೊಫೆಸರ್ ನಾನಿಕ ದತ್ತ ಅವರ ಪ್ರಯತ್ನದಿಂದ ಈ ಮೊಹಮ್ಮದ್ ಶಫಿ ಅವರ ಪಾಕಿಸ್ತಾನಿ ಕುಟುಂಬವನ್ನು ಸಂಪರ್ಕಿಸಿ ಅವರ ನಡುವೆ ಸಂಬಂಧ ಏರ್ಪಡುವಂತೆ ಮಾಡಲಾಗಿದೆ.

ಈ ಮಹೀಂದರ್ ಸಿಂಗ್ ಗಿಲ್ ಅವರ ತಂದೆಯ ಹೆಸರು ಚಿರಾಗ್ ದೀನ್ ಮತ್ತು ತಾಯಿಯ ಹೆಸರು ಫಾತಿಮಾ. ಇವರು ಹೇಳಿದ ಆ ಊರಿನ ಹೆಸರನ್ನು ಗೂಗಲ್ ಮಾಡಿದಾಗ ಪಾಕಿಸ್ತಾನದ ಪೂರ್ವ ಪಂಜಾಬ್ ನ ಪ್ರದೇಶದಲ್ಲಿ ಅದಿರುವುದು ಪತ್ತೆಯಾಗಿದೆ. ಅಲ್ಲಿನ ಸಂಜೆ ವಾಲೆ ಎಂಬ ಯುಟ್ಯೂಬರ್ ಆದ ಲಷ್ ಹರಿ ಅವರನ್ನ ದತ್ತ ಅವರು ಸೋಶಿಯಲ್ ಮೀಡಿಯಾದ ಮೂಲಕ ಸಂಪರ್ಕಿಸಿ ಮಹೀಂದರ್ ಸಿಂಗ್ ಅವರ ಕುಟುಂಬವನ್ನು ಸಂಪರ್ಕಿಸುವಂತೆ ಕೇಳಿಕೊಂಡಿದ್ದಾರೆ. ಲಶ್ ಹರಿ ಅವರು ಪಾಕಿಸ್ತಾನದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮತ್ತು 77 ವರ್ಷಗಳ ಬಳಿಕ ಈ ಮಹೀಂದರ್ ಸಿಂಗ್ ಅವರ ಕುಟುಂಬ ಮತ್ತು ಅವರ ತಂದೆಯ ಕುಟುಂಬ ಭೇಟಿಯಾಗಿದೆ.

ಆ ಬಳಿಕ ಗೂಗಲ್ ಮೂಲಕ ಪರಸ್ಪರ ಮಾತಾಡಿದ್ದಾರೆ. ಈಗ ಮಹೀಂದರ್ ಗಿಲ್ ತನ್ನ ಹೆಸರನ್ನ ಮಹಿಂದರ್ ಶಾಪಿ ಎಂದು ಬದಲಿಸಿಕೊಂಡಿದ್ದಾರೆ. ಇಷ್ಟೊಂದು ದೀರ್ಘಕಾಲ ಅಗಲಿಕೆಯ ಬಳಿಕ ಒಂದಾಗುವ ಅಪರೂಪದ ಘಟನೆ ಇದು ಎಂದು ಹೇಳಲಾಗಿದೆ.