ವಿದ್ಯಾರ್ಥಿಗಳನ್ನು ಶಿಕ್ಷಕರು ಕತ್ತೆ, ಒಂಟೆ ಕರೆದರೆ ಕಠಿಣ ಕ್ರಮ; ಹೊಸ ಕಾನೂನು

0
63

ಸನ್ಮಾರ್ಗ ವಾರ್ತೆ

ಪಟ್ನಾ: ಬಿಹಾರದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ವಿರುದ್ಧ ಕೀಳುಮಟ್ಟದ ಭಾಷೆ ಬಳಸುತ್ತಿರುವ ಬಗ್ಗೆ ಪೋಷಕರಿಂದ ವ್ಯಾಪಕ ದೂರುಗಳು ಬಂದ ಬೆನ್ನಲ್ಲೇ, ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ಈ ಕುರಿತು ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಹೊರಡಿಸಿದೆ. ಇದನ್ನು ತಕ್ಷಣದಿಂದಲೇ ಪಾಲನೆ ಮಾಡಬೇಕು ಎಂದು ಸೂಚಿಸಲಾಗಿದೆ.

ಶಿಕ್ಷಕರು ತಮ್ಮ ಮಕ್ಕಳನ್ನು ವಿವಿಧ ಅಪಮಾನಕರ ಪದಗಳನ್ನು ಬಳಸಿಕೊಂಡು ನಿಂದಿಸುತ್ತಿರುವ ಬಗ್ಗೆ, ಬಿಹಾರದ ಹಲವು ಸರ್ಕಾರಿ ಶಾಲೆಗಳ ಪ್ರಾಂಶುಪಾಲರಿಗೆ ಪೋಷಕರು ಹಲವು ದೂರುಗಳನ್ನು ಸಲ್ಲಿಸಿದ್ದರು. ಆದರೆ, ಪ್ರಾಂಶುಪಾಲರು ಇವುಗಳನ್ನು ನಿರ್ಲಕ್ಷಿಸಿದ್ದರಿಂದ ಪೋಷಕರ ಆಕ್ರೋಶ ತೀವ್ರಗೊಂಡಿತ್ತು.

ವಿಷಯದ ಗಂಭೀರತೆಯನ್ನು ಅರಿತ ಶಿಕ್ಷಣ ಇಲಾಖೆಯು ಈ ಕುರಿತು ಮಾರ್ಗಸೂಚಿಯನ್ನು ಪ್ರಕಟಿಸಿದೆ. ಶಿಕ್ಷಕರನ್ನು ಗುರುತಿಸಿ, ವಿದ್ಯಾರ್ಥಿಗಳ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸದಂತೆ ಎಚ್ಚರಿಕೆ ನೀಡಬೇಕು ಮತ್ತು ಶಾಲಾ ಪರಿಸರದಲ್ಲಿ ಆರೋಗ್ಯಕರ ವಾತಾವರಣವನ್ನು ಒದಗಿಸಲು ನೋಡಿಕೊಳ್ಳಬೇಕು ಎಂದು ಸರ್ಕಾರಿ ಶಾಲೆಗಳ ಪ್ರಾಂಶುಪಾಲರಿಗೆ ಸರ್ಕಾರ ಸೂಚನೆ ನೀಡಿದೆ.