ಮುಸ್ಲಿಮರ ಮೇಲೆ ಹೆಚ್ಚುತ್ತಿರುವ ದಾಳಿ: ಜಮಾಅತೆ ಇಸ್ಲಾಮೀ ಹಿಂದ್ ಕಳವಳ

0
79

ಸನ್ಮಾರ್ಗ ವಾರ್ತೆ

ಹೆಚ್ಚುತ್ತಿರುವ ಮುಸ್ಲಿಂ ವಿರೋಧಿ ದಾಳಿಗಳ ಬಗ್ಗೆ ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸಯ್ಯದ್ ಸಆದತುಲ್ಲಾ ಹುಸೇನಿ ಕಳವಳ ವ್ಯಕ್ತಪಡಿಸಿದ್ದಾರೆ. ಗಿರ್ ಸೋಮನಾಥ ಜಿಲ್ಲೆಯಲ್ಲಿ 500 ವರ್ಷಗಳ ಹಳೆಯ ಮಸೀದಿಯನ್ನು ದ್ವಂಸಗೊಳಿಸಲಾಗಿದೆ. ಪ್ರವಾದಿ ಮುಹಮ್ಮದ್ ರನ್ನು ಸನ್ಯಾಸಿಯೊಬ್ಬರು ನಿಂದಿಸಿದರು, ಆದರೂ ಅವರನ್ನು ಈವರೆಗೂ ಬಂಧಿಸಲಾಗಿಲ್ಲ ಎಂದು ಹುಸೇನಿ ಅಭಿಪ್ರಾಯ ಪಟ್ಟಿದ್ದಾರೆ

ಬೆರಿನಾಗ್ ಎಂಬಲ್ಲಿ ಪಾಳು ಬಿದ್ದ ಮನೆಯನ್ನು ನಮಾಜಿನ ಸ್ಥಳವಾಗಿ ಪರಿವರ್ತಿಸಲಾಗಿದೆ ಎಂಬುದು ದೂರು. ಈ ಮಸೀದಿಯನ್ನು ತಕ್ಷಣ ತೆರವುಗೊಳಿಸಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ರಾಷ್ಟ್ರೀಯ ಸೇವಾ ಸಂಘಟನೆ ಬೆದರಿಕೆ ಹಾಕಿದೆ.

ಹಲ್ದ್ವಾನಿಯಲ್ಲಿ ವಾಸಿಸುತ್ತಿರುವ ಆಸಿಮ್ ಎಂಬ ವರ ಮಾಲಿಕತ್ವದ ಮನೆ ಇದು. ಕಳೆದ 25 ವರ್ಷಗಳಿಂದ ನೂರಕ್ಕಿಂತಲೂ ಅಧಿಕ ಮುಸ್ಲಿಂ ಕುಟುಂಬಗಳು ಇದನ್ನು ನಮಾಜ್ ಮಾಡಲು ಉಪಯೋಗಿಸುತ್ತಿದೆ. ಮನೆಯ ಒಂದು ಭಾಗವನ್ನ ಮದರಸವಾಗಿಯೂ ಇಲ್ಲಿನ ಊರವರು ಬಳಸುತ್ತಿದ್ದಾರೆ. ಹೊರಗಿನಿಂದ ಇದು ಮನೆಯಂತೆ ಕಂಡರೂ ವರ್ಷಗಳಿಂದ ಇದನ್ನು ನಮಾಜ್ ಗಾಗಿ ಮತ್ತು ಮದರಸಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಊರಿನ ಮುಸ್ಲಿಮರು ಹೇಳಿದ್ದಾರೆ.

ಇದೇ ವೇಳೆ ಮಸೀದಿಯ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಜನರ ನಡುವೆ ದ್ವೇಷವನ್ನು ಹುಟ್ಟು ಹಾಕಿದ ಆರೋಪದಲ್ಲಿ ರಾಷ್ಟ್ರೀಯ ಸೇವಾ ಸಂಘಟನೆಯ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.