ಇಸ್ರೇಲ್- ಇರಾನ್ ಸಂಘರ್ಷ: ಭಾರತದ ಬಾಸ್ಮತಿ ಅಕ್ಕಿ ರಫ್ತಿಗೆ ವಿಘ್ನ

0
72

ಸನ್ಮಾರ್ಗ ವಾರ್ತೆ

ಇಸ್ರೇಲ್ ಮತ್ತು ಇರಾನ್ ನಡುವಿನ ಘರ್ಷಣಾತ್ಮಕ ಸ್ಥಿತಿಯು ಭಾರತದ ಬಾಸ್ಮತಿ ಅಕ್ಕಿ ರಫ್ತಿನ ಮೇಲೆ ಭಾರಿ ಅಡ್ಡ ಪರಿಣಾಮವನ್ನು ಬೀರಿದೆ. ಬಾಸ್ಮತಿ ಅಕ್ಕಿಯನ್ನು ಉತ್ಪಾದಿಸುವ ಪ್ರಮುಖ ರಾಜ್ಯ ಪಂಜಾಬ್ ಆಗಿದ್ದು, ಜಗತ್ತಿಗೆ ರಫ್ತಾಗುವ ಒಟ್ಟು ಬಾಸ್ಮತಿ ಅಕ್ಕಿಯಲ್ಲಿ 40 ಶೇಕಡಾವನ್ನು ಭಾರತವೇ ಪೂರೈಸುತ್ತಿದೆ. ಇದರಲ್ಲಿ 25 ಶೇಕಡಾ ಬಾಸ್ಮತಿ ಅಕ್ಕಿಯನ್ನು ಭಾರತ ಇರಾನಿಗೆ ರಫ್ತು ಮಾಡುತ್ತಿದೆ.

ಇರಾನ್ ಗೆ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡುವ ವಿಷಯದಲ್ಲಿ ಇನ್ಶೂರೆನ್ಸ್ ಕಂಪನಿಗಳು ಇನ್ಶೂರ್ ನೀಡುವುದನ್ನು ನಿಲ್ಲಿಸಿವೆ. ಇದರಿಂದಾಗಿ ಬಾಸ್ಮತಿ ಅಕ್ಕಿಯನ್ನು ಖರೀದಿಸುವುದಕ್ಕೆ ರಫ್ತುಧಾರ ಕಂಪನಿಗಳು ಮತ್ತು ಸಗಟು ವ್ಯಾಪಾರಿಗಳು ನಿರಾಕರಿಸುತ್ತಿದ್ದಾರೆ. ಆದ್ದರಿಂದ ಬಾಸ್ಮತಿ ಅಕ್ಕಿಯ ಬೆಲೆ ಕ್ವಿಂಟಲ್ ಗೆ 800 ರೂಪಾಯಿಯಷ್ಟು ಕುಸಿದಿದೆ. ಇದು ಭಾರತೀಯ ರೈತರನ್ನು ಕಂಗಾಲಾಗಿಸಿದೆ.

ಕಳೆದ ವರ್ಷ ಭಾರತ ಒಟ್ಟು 48 ಕೋಟಿ 389 ಲಕ್ಷ ರೂಪಾಯಿ ಬಾಸ್ಮತಿ ಅಕ್ಕಿಯನ್ನು ವಿದೇಶಕ್ಕೆ ರಫ್ತು ಮಾಡಿತ್ತು. ಭಾರತದಿಂದ ರಫ್ತಾಗುವ ಬಾಸ್ಮತಿ ಅಕ್ಕಿಯಲ್ಲಿ 25 ಶೇಕಡಾ ಅಕ್ಕಿಯನ್ನು ಇರಾನ್ ಖರೀದಿಸುತ್ತಿದ್ದು ಇದೀಗ ಅಕ್ಟೋಬರ್ 21ರಿಂದ ಡಿಸೆಂಬರ್ 21ರವರೆಗೆ ಅಕ್ಕಿ ರಫ್ತನ್ನು ರದ್ದುಪಡಿಸಲಾಗಿದೆ.

ಇನ್ನೊಂದಡೆ ಇನ್ಶೂರೆನ್ಸ್ ಕಂಪನಿಗಳು ಇನ್ಶೂ ರ್ ನೀಡುವುದಕ್ಕೆ ನಿರಾಕರಿಸುತ್ತಿವೆ. ಹಾಗೆಯೇ ಭಾರತದ ಬಾಸ್ಮತಿ ಅಕ್ಕಿಯನ್ನು ಖರೀದಿಸುವ ಇನ್ನೊಂದು ರಾಷ್ಟ್ರ ಸೌದಿ ಅರೇಬಿಯವಾಗಿದ್ದು ಅದು ಒಂದು ಮಿಲಿಯನ್ ಟನ್ ಬಾಸ್ಮತಿ ಅಕ್ಕಿಯನ್ನು ಖರೀದಿಸುತ್ತಿದೆ. ಇದೇವೇಳೆ ಈ ಬಾಸ್ಮತಿ ಅಕ್ಕಿ ಜೆದ್ದಾ ಬಂದರ್ ಮೂಲಕ ಸೌದಿ ಅರೇಬಿಯಾಕ್ಕೆ ತಲುಪುತ್ತಿದೆ. ಆದರೆ ಈ ಜೆದ್ದಾ ಬಂದರು ಪಟ್ಟಣವು ಯಮನ್ ಗೆ ಹತ್ತಿರವಾಗಿದ್ದು ಹೂತಿಗಳ ದಾಳಿಯ ಭಯದಿಂದಾಗಿ ಈ ವ್ಯಾಪಾರಕ್ಕೂ ತಡೆ ಬೀಳುತ್ತಿದೆ ಎಂದು ವರದಿಯಾಗಿದೆ.