ಆರೆಸ್ಸೆಸ್ ದೇಶಸೇವೆಗೆ ಸಮರ್ಪಿತವಾಗಿದೆ ; ಸಂಸ್ಥಾಪನಾ ದಿನ ಶ್ಲಾಘಿಸಿದ ಮೋದಿ

0
116

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ತನ್ನ ನೂರನೇ ವರ್ಷಕ್ಕೆ ಕಾಲಿಡುತ್ತಿದ್ದು, ಅದರ ಸಂಸ್ಥಾಪನಾ ದಿನದ ಪ್ರಯುಕ್ತ ನರೇಂದ್ರ ಮೋದಿ ಆರೆಸ್ಸೆಸ್ ಕಾರ್ಯಕರ್ತರಿಗೆ ಶುಭಾಶಯ ಕೋರಿದ್ದಾರೆ. ಮಾತ್ರವಲ್ಲದೆ ಈ ಮೈಲಿಗಲ್ಲನ್ನು ದಾಟುತ್ತಿರುವ ಆರೆಸ್ಸೆಸ್ ದೇಶ ಸೇವೆಗೆ ಸಮರ್ಪಿತವಾಗಿದೆ ಎಂದು ಹೇಳಿದ್ದಾರೆ.

ಆರೆಸ್ಸೆಸ್ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ನಿನ್ನೆ ವಿಜಯದಶಮಿಯಂದು ಮಾಡಿದ ಭಾಷಣದ ಲಿಂಕನ್ನು ಸಾಮಾಜಿಕ ಜಾಲತಾಣ x ಪೋಸ್ಟ್ ನಲ್ಲಿ ಶೇರ್ ಈ ಭಾಷಣವನ್ನು ಎಲ್ಲರೂ ಕೇಳಲೇಬೇಕು ಎಂದು ಆಗ್ರಹಿಸಿದ್ದಾರೆ.

ಹಿಂದುತ್ವ ಸಂಘಟನೆಯನ್ನು ಶ್ಲಾಘಿಸಿದ ಮೋದಿ, ಬಿಜೆಪಿ ಸೇರುವ ಮೊದಲು ನಾನೂ ಆರೆಸ್ಸೆಸ್ ನಲ್ಲಿ ಪ್ರಚಾರಕನಾಗಿದ್ದೆ. ಭಾರತ ಮಾತೆಯ ಸೇವೆಗೆ ಅದು ಬದ್ದವಾಗಿದೆ ಮತ್ತು ವಿಕಸಿತ ಭಾರತವನ್ನು ಸಾಧಿಸಲು ಪ್ರತಿ ಪೀಳಿಗೆಯನ್ನು ಪ್ರೇರೇಪಿಸುತ್ತದೆ ಎಂದು ಹೇಳಿದರು.

1925 ರಲ್ಲಿ ರಚನೆಯಾದ ಆರ್‌ಎಸ್‌ಎಸ್ ಅನ್ನು ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಎಂದು ಪರಿಗಣಿಸಲಾಗಿದ್ದು, ಅದರ ಸ್ವಯಂಸೇವಕರು ದಶಕಗಳಿಂದ ಸಂಘಟನೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಆರ್‌ಎಸ್‌ಎಸ್ ಕಾರ್ಯಕರ್ತರು ಬಿಜೆಪಿಯ ರಾಷ್ಟ್ರೀಯ ಮತ್ತು ರಾಜ್ಯ ಘಟಕಗಳಲ್ಲಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸ್ಥಾನವನ್ನು ಏಕರೂಪವಾಗಿ ಗಿಟ್ಟಿಸಿಕೊಳ್ಳುತ್ತಾರೆ. ಪಕ್ಷದ ಸಂಘಟನೆಯು ಸೈದ್ಧಾಂತಿಕ ಒಗ್ಗಟ್ಟು ಮತ್ತು ಶಿಸ್ತಿನಿಂದ ಕೆಲಸ ಮಾಡುತ್ತದೆ ಎಂದವರು ಪ್ರತಿಪಾದಿಸುತ್ತಾರೆ.