ಗಾಝಾದ ಮೇಲೆ ಇಸ್ರೇಲ್ ದಾಳಿಯನ್ನು ಪ್ರಶ್ನಿಸಿ ಅಮೆರಿಕದಲ್ಲಿ ಬೃಹತ್ ಧರಣಿ ನಡೆಸಿದ ಯಹೂದಿಯರು

0
551

ಸನ್ಮಾರ್ಗ ವಾರ್ತೆ

ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗೆ ಅಮೆರಿಕ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಅಮೆರಿಕಾದ ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ ಬಳಿ ಫೆಲೆಸ್ತೀನಿ ಪರ ಬೆಂಬಲಿಗರು ಧರಣಿ ನಡೆಸಿದ್ದಾರೆ.

ಸುಮಾರು 200 ರಷ್ಟು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.

ಜ್ಯೂಯಿಸ್ ವಾಯ್ಸ್ ಫಾರ್ ಪೀಸ್ ಮುಂತಾದ ಹೆಸರಿನ ಸಂಘಟನೆಗಳು ಕೂಡ ಈ ಧರಣಿಯಲ್ಲಿ ಭಾಗವಹಿಸಿದ್ದು ವು. ಗಾಝಾವನ್ನು ಬದುಕಲು ಬಿಡಿ, ಜನಾಂಗ ಹತ್ಯೆಗೆ ಧನಸಹಾಯ ಮಾಡುವುದನ್ನು ನಿಲ್ಲಿಸಿ.. ಎಂದು ಪ್ರತಿಭಟನಾಕಾರರು ಘೋಷಿಸಿದರು. ಸುಮಾರು 500 ರಷ್ಟು ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.

ಜೊತೆಗೆ ಲೆಬನಾನ್ ಮೇಲೆ ಇಸ್ರೇಲ್ ಸಾರಿರುವ ಯುದ್ಧದ ವಿರುದ್ಧವೂ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರತಿಭಟನೆಯಲ್ಲಿ ನೂರಕ್ಕಿಂತಲೂ ಅಧಿಕ ಯಹೂದಿಯರು ಭಾಗವಹಿಸಿದ್ದರು ಎಂದು ಕೂಡ ವರದಿಯಾಗಿದೆ.