ಕೋಮುಗಲಭೆ: ಮುಸ್ಲಿಂ ಜರ್ನಲಿಸ್ಟ್ ಗಳ ಪಟ್ಟಿ ಮಾಡಿ ಧರ್ಮದ್ವೇಷ ಪ್ರಚಾರ ಮಾಡಿದ ಉತ್ತರ ಪ್ರದೇಶದ ಬಿಜೆಪಿ ಶಾಸಕ

0
682

ಸನ್ಮಾರ್ಗ ವಾರ್ತೆ

ಉತ್ತರ ಪ್ರದೇಶದ ಬಹರಿಚ್ ನಲ್ಲಿ ಕೋಮುಗಳಭೆ ನಡೆದಿರುವುದು ಮತ್ತು ಗೋಪಾಲ್ ಮಿಶ್ರಾ ಎಂಬವ ಗುಂಡಿಗೆ ಬಲಿಯಾಗಿರುವುದರ ನಡುವೆಯೇ ಇದೀಗ ಅಲ್ಲಿನ ಬಿಜೆಪಿ ಶಾಸಕ ಹೊಸ ಕೋಮು ಪ್ರಚೋದನಕಾರಿ ವರ್ತನೆ ತೋರಿದ್ದಾರೆ.

ಶಲಾಬ್ ಮನಿ ತ್ರಿಪಾತಿ ಎಂಬ ಈ ಶಾಸಕ 13 ಮಂದಿ ಮುಸ್ಲಿಂ ಜರ್ನಲಿಸ್ಟ್ ಗಳ ಹೆಸರನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದು ಇವರು ಪಕ್ಷಪಾತಿತನದಿಂದ ವರದಿ ಮಾಡುತ್ತಿದ್ದಾರೆ ಎಂದು ಬರಕೊಂಡಿದ್ದಾರೆ. ಆದರೆ ಒಬ್ಬನೇ ಒಬ್ಬ ಹಿಂದು ಜರ್ನಲಿಸ್ಟ್ ಹೆಸರನ್ನು ಅವರು ನಮೂದಿಸಿಲ್ಲ. ಈ ಬಗ್ಗೆ ದಿ ವಯರ್ ಅಂತರ್ಜಾಲವು ವಿವರವಾಗಿ ವರದಿ ಮಾಡಿದೆ.

ಈ ಶಲಬ್ ಮಣಿ ತ್ರಿಪಾಠಿಯವರು ಈ ಮೊದಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಾಧ್ಯಮ ಸಲಹೆಗಾರರಾಗಿದ್ದರು ಮತ್ತು ಅದಕ್ಕಿಂತಲೂ ಮೊದಲು ಟಿವಿ ಜರ್ನಲಿಸ್ಟ್ ಆಗಿ ಕೆಲಸ ಮಾಡಿದ್ದರು.

ಬಹರೆಚ್ ನಿಂದ ಸುದ್ದಿಗಳನ್ನು ವರದಿ ಮಾಡುತ್ತಿರುವ ಜರ್ನಲಿಸ್ಟ್ ಗಳ ಹೆಸರುಗಳನ್ನು ಒಮ್ಮೆ ನೋಡಿ. ಸುದ್ದಿಗಳು ಯಾಕೆ ಪಕ್ಷಪಾತತನದಿಂದ ಕೂಡಿವೆ ಅನ್ನೋದು ನಿಮಗೆ ಈ ಪಟ್ಟಿ ನೋಡಿದ್ರೆ ಗೊತ್ತಾದೀತು. ಇವರಲ್ಲಿ ಯೂಟ್ಯೂಬರ್ಸ್ ಕೂಡಾ ಸೇರಿದ್ದಾರೆ. ಇವರೆಲ್ಲ ಗಲಭೆಕೋರರನ್ನು ರಕ್ಷಿಸಲು ಮತ್ತು ಸುಳ್ಳನ್ನು ಹರಡಲು ಶ್ರಮಿಸುತ್ತಿದ್ದಾರೆ ಎಂದು ಅವರು ತನ್ನ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಇವರು ಹೆಸರಿಸಿದ ಜರ್ನಲಿಸ್ಟ್ ಗಳು ಎನ್.ಡಿ ಟಿವಿ, ಪಿ.ಟಿ.ಐ, ಇಂಡಿಯಾ ಟಿವಿ, ನ್ಯೂಸ್ 24, ಭಾಸ್ಕರ್ ಟಿವಿ ಮತ್ತು ಭಾರತ್ ಸಮಾಚಾರ್ ಮುಂತಾದ ಸುದ್ದಿ ಮಾಧ್ಯಮಗಳಿಗೆ ಸೇರಿದವರಾಗಿದ್ದಾರೆ. ಆದರೆ ಬಹರೆಚ್ ನಿಂದ ಸುದ್ದಿಗಳನ್ನು ವಿವಿಧ ಟಿವಿ ಚಾನಲ್ ಳಿಗೆ ವರದಿ ಮಾಡುತ್ತಿರುವವರಲ್ಲಿ ಹಿಂದೂ ಜರ್ನಲ್ ಲಿಸ್ಟ್ ಗಳೂ ಇದ್ದಾರೆ. ಆದರೆ ಈ ತ್ರಿಪಾಠಿ ಅವರಲ್ಲಿ ಒಬ್ಬರೇ ಒಬ್ಬರ ಹೆಸರನ್ನು ಕೂಡ ಉಲ್ಲೇಖಿಸಿಲ್ಲ.

ಜರ್ನಲಿಸ್ಟ್ ಗಳ ಹೆಸರನ್ನು ಉಲ್ಲೇಖಿಸುವ ಮೂಲಕ ಅವರು ಧರ್ಮ ದ್ವೇಷವನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.