ವಂಚನೆ ಪ್ರಕರಣ: ಕೇಂದ್ರ ಸಚಿವ ಸ್ಥಾನಕ್ಕೆ ಪ್ರಹ್ಲಾದ್ ಜೋಶಿ ರಾಜಿನಾಮೆ ನೀಡಲಿ: ವೆಲ್ಪೇರ್ ಪಾರ್ಟಿ

0
63

ಸನ್ಮಾರ್ಗ ವಾರ್ತೆ

ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ವಿಜಯಪುರ ಜಿಲ್ಲೆಯ ನಾಗಠಾಣ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ದೇವಾನಂದ್ ಫೂಲ್ ಸಿಂಗ್ ಚವಾಣ್ ರಿಂದ ಎರಡು ಕೋಟಿ ಹಣವನ್ನು ಪ್ರಹ್ಲಾದ್ ಜೋಶಿ ಅಣ್ಣ ಗೋಪಾಲ ಜೋಶಿ ಸುಲಿಗೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಪ್ರಕರಣ ದಾಖಲಾಗಿದ್ದು ಪ್ರಹ್ಲಾದ್ ಜೋಶಿಯವರು ಕೇಂದ್ರ ಸಚಿವ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಆಗ್ರಹಿಸಿದ್ದಾರೆ.

ಇದು ಗಂಭೀರ ಪ್ರಕರಣವಾಗಿದ್ದು ಮಾಧ್ಯಮಗಳು ಇದನ್ನು ಲಘುವಾಗಿ ಪರಿಗಣಿಸಬಾರದು. ಸಚಿವರ ಪ್ರಭಾವವನ್ನು ದುರುಪಯೋಗಪಡಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಹೀಗಾಗಿ ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿರುವ ಕಾರಣ ಅವರು ತಕ್ಷಣ ರಾಜೀನಾಮೆ ನೀಡಬೇಕು. ಸಚಿವರ ಕುಟುಂಬದ ಇತರರ ಹೆಸರೂ ಕೇಳಿಬರುತ್ತಿದೆ. ಗೃಹ ಸಚಿವರ ಅಪ್ತ ಸಹಾಯಕರ ಹೆಸರನ್ನೂ ದುರುಪಯೋಗ ಮಾಡಲಾಗಿದೆ. ಈ ಪ್ರಕರಣದ ಆರೋಪಿಗಳ ಬಂಧನದ ಬೇಟೆ ಆರಂಭಿಸಿದ ಕೂಡಲೇ ಮೂಡಾ ಕಚೇರಿಗೆ ಇಡಿ ದಾಳಿ ನಡೆಸಿರುವುದನ್ನು ಗಮನಿಸಿದಾಗ ಪೃಕರಣವನ್ನು ಮರೆಮಾಚುವ ವ್ವವಸ್ಥಿತ ತಂತ್ರವೇ ಅಥವಾ ಬೆದರಿಕೆ ತಂತ್ರವೇ ಎಂಬ ಅನುಮಾನ ಮೂಡಿದೆ ಎಂದೂ ಅವರು ಹೇಳಿದರು.