ತುರ್ಕಿ ಸಚಿವರೊಂದಿಗೆ ಮಾತುಕತೆ ನಡೆಸಿದ ಹಮಾಸ್ ಮುಖಂಡರು

0
82

ಸನ್ಮಾರ್ಗ ವಾರ್ತೆ

ಹಮಾಸ್ ಮುಖಂಡ ಯಹ್ಯಾ ಸಿನ್ವಾರ್ ಅವರ ಹತ್ಯೆಯ ಬಳಿಕ ಹಮಾಸ್ ನಾಯಕರ ಜೊತೆ ತುರ್ಕಿ ವಿದೇಶಾಂಗ ಸಚಿವರು ಮಾತುಕತೆ ನಡೆಸಿದ್ದಾರೆ. ತುರ್ಕಿ ರಾಜಧಾನಿ ಇಸ್ತಾಂಬುಲ್ ನಲ್ಲಿ ಸಚಿವ ಹಖಾನ್ ಫಿಧಾನ್ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹಮಾಸ್ ಶೂರ ಕೌನ್ಸಿಲ್ ನ ಮುಖ್ಯಸ್ಥರಾದ ಮುಹಮ್ಮದ್ ಧರ್ವೇಶ್ ಮತ್ತು ರಾಜಕೀಯ ನಾಯಕರು ಈ ಮಾತುಕತೆಯಲ್ಲಿ ಭಾಗಿಯಾಗಿದ್ದಾರೆ.

ಗಾಝಾದಲ್ಲಿ ಯುದ್ಧ ವಿರಾಮವನ್ನು ಕೈಗೊಳ್ಳುವ ವಿಷಯದಲ್ಲಿ ಚರ್ಚೆ ನಡೆಸುವುದಕ್ಕಾಗಿ ಈ ಮಾತುಕತೆ ನಡೆದಿದೆ ಎಂದು ವರದಿಯಾಗಿದೆ. ಸಿನ್ವಾರ್ ಸಾವಿಗೆ ತುರ್ಕಿ ಗಾಢ ವಿಷಾದವನ್ನು ವ್ಯಕ್ತಪಡಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

ಇಸ್ರೇಲ್ ನಲ್ಲಿ ಬಂಧನದಲ್ಲಿರುವ ಫೆಲೆಸ್ತೀನಿಯರು ಮತ್ತು ಹಮಾಸ್ ನ ಬಂಧನದಲ್ಲಿರುವ ಒತ್ತೆಯಾಳುಗಳ ಬಿಡುಗಡೆಯ ಕುರಿತಾದ ವಿಷಯವೂ ಚರ್ಚೆಯಲ್ಲಿ ಪ್ರಸ್ತಾಪವಾಗಿದೆ.

ಕತಾರ್ ನಲ್ಲಿ ನೆಲೆಸಿರುವ ಹಮಾಸ್ ರಾಜಕೀಯ ವಿಭಾಗದ ಮುಖ್ಯಸ್ಥರಾದ ಖಾಲಿದ್ ಅಲ್ ಹಯ್ಯ, ಮೂಸಾ ಅಬೂ ಮರ್ ಝೋಕ್, ಸಾಹಿರ್ ಜಬರಿಯ್ಯ ಮುಂತಾದವರು ತುರ್ಕಿ ಸಚಿವರೊಂದಿಗೆ ಮಾತುಕತೆಯಲ್ಲಿ ಭಾಗಿಯಾಗಿದ್ದಾರೆ. ಈ ನಡುವೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚೆ ಅವರು ಕೂಡ ತುರ್ಕಿಗೆ ತಲುಪಿದ್ದಾರೆ. ಅವರು ತುರ್ಕಿ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.