ಸುಪ್ರೀಂ ಕೋರ್ಟ್ ಜನರ ನ್ಯಾಯಾಲಯ, ವಿರೋಧ ಪಕ್ಷವಲ್ಲ; ಸಿಜೆಐ ಡಿವೈ ಚಂದ್ರಚೂಡ್

0
91

ಸನ್ಮಾರ್ಗ ವಾರ್ತೆ

ಪಣಜಿ: ಸಂಸತ್ತಿನಲ್ಲಿ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವುದು ಸುಪ್ರೀಂ ಕೋರ್ಟ್‌ನ ಜವಾಬ್ದಾರಿಯಲ್ಲ ಎಂದು ಸಿಜೆಐ ಡಿವೈ ಚಂದ್ರಚೂಡ್ ಸ್ಪಷ್ಟಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ ಜನರ ನ್ಯಾಯಾಲಯವಾಗಿ ಪಾತ್ರ ನಿರ್ವಹಿಸಬೇಕು ಎಂದು ದಕ್ಷಿಣ ಗೋವಾದಲ್ಲಿ ನಡೆದ ಸುಪ್ರೀಂ ಕೋರ್ಟ್ ಅಡ್ವಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್‌ ಮೊದಲ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನಿರ್ದಿಷ್ಟ ಪ್ರಕರಣಗಳ ತೀರ್ಪು ಅಥವಾ ಕಾನೂನು ಅಸಂಗತತೆಯ ಲೋಪದ ಬಗ್ಗೆ ಟೀಕೆ ಮಾಡಬಹುದೇ ವಿನಾ ಅದರ ಪಾತ್ರ, ಪ್ರಕರಣಗಳ ಫಲಿತಾಂಶಗಳ ಸ್ವರೂಪವನ್ನು ಪ್ರಶ್ನಿಸಲಾಗದು ಎಂದು ಹೇಳಿದರು.

ನಮ್ಮದು ಜನರ ನ್ಯಾಯಾಲಯವಾಗಿದೆ. ಸರ್ವೋಚ್ಚ ನ್ಯಾಯಾಲಯ ಪ್ರಮುಖ ಪ್ರಕರಣಗಳ ಬಗ್ಗೆ ಮಾತ್ರ ಗಮನ ಹರಿಸಬೇಕು. ಕಳೆದ 75 ವರ್ಷಗಳಲ್ಲಿ ಅಭಿವೃದ್ಧಿಪಡಿಸಿದ ನ್ಯಾಯ ಮಾದರಿಯ ಕಾಪಾಡಿಕೊಳ್ಳುವ ಅಗತ್ಯವನ್ನು ಅವರು ತಮ್ಮ ಭಾಷಣದಲ್ಲಿ ಎತ್ತಿ ತೋರಿಸಿದರು.

ನನ್ನ ಪ್ರಕಾರ, ವಿಶೇಷವಾಗಿ ಇಂದಿನ ದಿನಗಳಲ್ಲಿ ನೀವು ಪರವಾಗಿ ತೀರ್ಪು ನೀಡಿದಾಗ ಸುಪ್ರೀಂ ಕೋರ್ಟ್ ಅದ್ಭುತ ಸಂಸ್ಥೆ ಎಂದು ಭಾವಿಸುವ ಪ್ರತಿಯೊಬ್ಬರ ನಡುವೆ ಈ ದೊಡ್ಡ ವಿಭಜನೆಯಿದೆ ಮತ್ತು ನೀವು ಅವರ ವಿರುದ್ಧ ನಿರ್ಧರಿಸಿದಾಗ ಅದು ಅವಮಾನಕ್ಕೊಳಗಾಗುತ್ತದೆ” ಎಂದು ಅವರು ಹೇಳಿದರು.