ಗಾಝಾ ಯುದ್ಧ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯಿಂದಲೇ ಕೊನೆಗೊಳ್ಳಬೇಕು : ಪುಟಿನ್

0
460

ಸನ್ಮಾರ್ಗ ವಾರ್ತೆ

ಗಾಝಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧವು ಫೆಲೆಸ್ತೀನ್ ರಾಷ್ಟ್ರದ ಸ್ಥಾಪನೆಯೊಂದಿಗೆ ಕೊನೆಗೊಳ್ಳಬೇಕು ಎಂದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌‌ ಪುಟಿನ್ ಹೇಳಿದರು. ಅವರು ಶುಕ್ರವಾರ ಮಾಸ್ಕೋದಲ್ಲಿ ಬ್ರಿಕ್ಸ್ ಮಾಧ್ಯಮ ವ್ಯವಸ್ಥಾಪಕರೊಂದಿಗಿನ ನಡೆದ ಭೇಟಿಯ ವೇಳೆ ಹೇಳಿದರು.

ಮಧ್ಯ ಪ್ರಾಚ್ಯದಲ್ಲಿ ಶಾಂತಿ ನೆಲೆಸಲು ಮತ್ತು ಸಮಸ್ಯೆ ಪರಿಹಾರವಾಲು ಫೆಲೆಸ್ತೀನ್ ರಾಷ್ಟ್ರದ ಸ್ಥಾಪನೆಯಿಂದಲೇ ಸಾಧ್ಯ. ಸೋವಿಯತ್ ಯುಗದಿಂದಲೇ ರಷ್ಯಾ ಇದೇ ಧೋರಣೆಯನ್ನು ಹೊಂದಿದೆ ಎಂದು ಅವರು ಹೇಳಿದರು.

ಇಸ್ರೇಲಿ-ಪ್ಯಾಲೆಸ್ತೀನ್ ಸಂಘರ್ಷದಲ್ಲಿ ಮಧ್ಯಸ್ಥಿಕೆ ಪ್ರಯತ್ನಗಳು ಮತ್ತೂ ನಡೆಯಬೇಕು ಎಂದು ಒತ್ತಿ ಹೇಳಿದ ಅವರು ಶಾಂತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಯುನೈಟೆಡ್ ಸ್ಟೇಟ್ಸ್, ವಿಶ್ವಸಂಸ್ಥೆ ಮತ್ತು ರಷ್ಯಾವನ್ನು ಪುನಃ ಸಕ್ರಿಯಗೊಳಿಸುವ ಅಗತ್ಯವಿದೆ. ಅಮೇರಿಕಾ ಮಧ್ಯಸ್ಥಿಕೆ ಮತ್ತು ಶಾಂತಿ ಪ್ರಕ್ರಿಯೆಗೆ ನಾಯಕತ್ವ ವಹಿಸಿತು, ಆದರೆ ಅದು ಸಂಪೂರ್ಣ ವಿಫಲವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಗಾಜಾದಲ್ಲಿ ಹೆಚ್ಚುತ್ತಿರುವ ಭೀಕರ ಪರಿಸ್ಥಿತಿಯು ವಿಶ್ವ ನ್ಯಾಯಪ್ರಿಯರ ಕಳವಳವನ್ನು ಹೆಚ್ಚಿಸುತ್ತಿದ್ದು, ಯುದ್ಧ ಮತ್ತಷ್ಟು ಉಲ್ಬಣಗೊಳ್ಳದಂತೆ ಅವರು ಮನವಿ ಮಾಡುತ್ತಿದ್ದಾರೆ.