ಅಸೆಂಬ್ಲಿ ಚುನಾವಣೆಯಲ್ಲಿ ಕಾಶ್ಮೀರ ಜಮಾಅತೆ ಇಸ್ಲಾಮಿ ಭಾಗಿ: ಮತದಾನ ಪ್ರಮಾಣದಲ್ಲಿ ಭಾರಿ ಹೆಚ್ಚಳ

0
192

ಸನ್ಮಾರ್ಗ ವಾರ್ತೆ

ಕಾಶ್ಮೀರ ಅಸೆಂಬ್ಲಿ ಚುನಾವಣೆಯಲ್ಲಿ ಕಾಶ್ಮೀರದ ಜಮಾಅತೆ ಇಸ್ಲಾಮಿಯು ಪಾಲುಗೊಳ್ಳುವ ಮೂಲಕ ಭಾರಿ ಪ್ರಮಾಣದಲ್ಲಿ ಮತದಾನವಾಗಲು ಕಾರಣವಾಗಿದೆ ಎಂದು ಹೇಳಲಾಗಿದೆ. ಜಮಾಅತೆ ಇಸ್ಲಾಮಿಯ ಪ್ರಾಬಲ್ಯವಿರುವ ಬೋಗಮ ಪ್ರದೇಶದಲ್ಲಿ ಈ ಬಾರಿ ಐವತ್ತು ಶೇಕಡಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಮತದಾನವಾಗಿರುವುದು ಇದಕ್ಕೆ ಉದಾಹರಣೆಯಾಗಿ ನೀಡಲಾಗಿದೆ.

ಕಾಶ್ಮೀರದ ಜಮಾಅತೆ ಇಸ್ಲಾಮಿಯನ್ನು ಈ ಮೊದಲು ನಿಷೇಧಿಸಲಾಗಿತ್ತು ಮತ್ತು ಅದು ಈ ಹಿಂದೆ ಚುನಾವಣಾ ರಾಜಕೀಯದಿಂದ ದೂರ ಉಳಿದಿತ್ತು.

ಒಟ್ಟು 10 ಸ್ವತಂತ್ರ ಅಭ್ಯರ್ಥಿಗಳನ್ನು ಅದು ಈ ಬಾರಿಯ ಚುನಾವಣೆಯಲ್ಲಿ ಬೆಂಬಲಿಸಿತ್ತು. ಪುಲ್ವಾಮಾ ಕುಲ್ಗಾಂ ಸಹಿತ ಕಾಶ್ಮೀರದ ವಿವಿಧ ಕಡೆ ಜಮಾಅತ್ ಸ್ವತಂತ್ರ ಅಭ್ಯರ್ಥಿಗಳನ್ನು ಬೆಂಬಲಿಸಿದ್ದು ಮತ್ತು ಜಮಾಅತ್ ಸಕ್ರಿಯವಾಗಿ ಭಾಗವಹಿಸಿದ ಕಡೆಗಳಲ್ಲೆಲ್ಲಾ ಅತ್ಯುತ್ತಮ ಪ್ರಮಾಣದಲ್ಲಿ ಮತದಾನವಾಗಿರುವುದು ಜಮಾಅತ್ ನ ನಿಲುವಿಗೆ ಸಾರ್ವಜನಿಕರಿಂದ ಸಿಕ್ಕಿದ ಬೆಂಬಲ ಎಂದು ಹೇಳಲಾಗುತ್ತಿದೆ.