ಆರೋಪಿಯ ಮನೆ ದ್ವಂಸಗೊಳಿಸಿದ ರಾಜಸ್ಥಾನ ಸರ್ಕಾರ: ಸುಪ್ರೀಂ ಕೋರ್ಟ್ ನ ತೀರ್ಪಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ

0
227

ಸನ್ಮಾರ್ಗ ವಾರ್ತೆ

ಆರೋಪಿಗಳ ಮನೆಯನ್ನು ದ್ವಂಸಗೊಳಿಸಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿರುವುದರ ಹೊರತಾಗಿಯೂ ರಾಜಸ್ಥಾನದ ಸರಕಾರ ಈ ತೀರ್ಪಿಗೆ ಕವಡೆಕಾಸಿನ ಕಿಮ್ಮತ್ತನ್ನೂ ಕೊಟ್ಟಿಲ್ಲ. ಮೂರು ದಿನಗಳ ಹಿಂದೆ ಜೈಪುರದ ಕರ್ನಿವಾರ್ ಪ್ರದೇಶದ ಮಂದಿರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್‌ಎಸ್ಎಸ್ ಕಾರ್ಯಕರ್ತನ ಮೇಲೆ ತಂದೆ ಮತ್ತು ಮಗ ಇಬ್ಬರು ಸೇರಿ ಹಲ್ಲೆ ನಡೆಸಿದ್ದರು. ಅದರ ಬೆನ್ನಿಗೆ ಅವರ ಮನೆಯನ್ನು ಬುಲ್ಡೋಜರ್ ಬಳಸಿ ದ್ವಂಸಗೊಳಿಸಲಾಗಿದೆ.

ನಸೀಬ್ ಚೌಧರಿ ಮತ್ತು ಅವರ ಮಗ ಭೀಷ್ಮ ಚೌಧರಿಯನ್ನು ಪೊಲೀಸರು ತಕ್ಷಣ ಬಂದಿಸಿದ್ದರು. ಬಳಿಕ ಜೈಪುರ್ ಡೆವಲಪ್ಮೆಂಟ್ ಅಥಾರಿಟಿಯ ಎನ್ಫಾರ್ಸ್ಮೆಂಟ್ ವಿಭಾಗವು ತಕ್ಷಣ ಸರ್ವೇ ನಡೆಸಿತು ಮತ್ತು 24 ಗಂಟೆಯ ಒಳಗೆ ಉತ್ತರಿಸುವಂತೆ ನೋಟಿಸು ನೀಡಿತು.

ಮಂದಿರ ಪ್ರದೇಶದಲ್ಲಿ ಅನಧಿಕೃತವಾಗಿ ಇವರು ಕಟ್ಟಡ ನಿರ್ಮಿಸಿದ್ದಾರೆ ಎಂದು ನೋಟಿಸ್ ನಲ್ಲಿ ಹೇಳಲಾಗಿತ್ತು. ಬಳಿಕ ಇವರ ಮನೆಯನ್ನು ದ್ವಂಸಗೊಳಿಸಲಾಗಿದೆ.

ಶರತ್ ಪೂರ್ಣಿಮಾ ಜಾಗರಣ ಸಮಾರಂಭದಲ್ಲಿ ರಾತ್ರಿಯ ವೇಳೆ ಗದ್ದಲ ಎಬ್ಬಿಸಿರುವುದನ್ನು ಪ್ರಶ್ನಿಸಿ ನಸೀಬ್ ಚೌಧರಿ ಮತ್ತು ಅವರ ಮಗ ಭೀಷ್ಮ ಚೌಧರಿಯವರು ಪ್ರಶ್ನಿಸಿ ಸಭಾಂಗಣಕ್ಕೆ ತೆರಳಿ ಆರ್ ಎಸ್ ಎಸ್ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದರು.