ಇರಾನ್ ವಿರುದ್ಧ ಇಸ್ರೇಲ್ ‘ಶೀಘ್ರದಲ್ಲೇ’ ಪ್ರತಿದಾಳಿ ನಡೆಸಲಿದೆ: ರಾಜ್ಯ ಮಾಧ್ಯಮ

0
189

ಸನ್ಮಾರ್ಗ ವಾರ್ತೆ

ಜೆರುಸಲೇಂ: ಇರಾನ್ ವಿರುದ್ಧ ಯೋಜನಾಬದ್ಧ ಪ್ರತಿದಾಳಿಯನ್ನು “ಅತಿ ಶೀಘ್ರದಲ್ಲಿಯೇ” ನಡೆಸಲಾಗುವುದು ಎಂಬ ಮಾಹಿತಿಯನ್ನು ಇಸ್ರೇಲ್ ಕ್ಯಾಬಿನೆಟ್ ಮಂತ್ರಿಗಳಿಗೆ ನೀಡಲಾಗಿದೆ ಎಂದು ರಾಜ್ಯ ಮಾಧ್ಯಮಗಳು ವರದಿ ಮಾಡಿವೆ.

ಇರಾನ್‌ನಲ್ಲಿ ಹಮಾಸ್ ರಾಜಕೀಯ ನಾಯಕ ಇಸ್ಮಾಯಿಲ್ ಹನಿಯ್ಯ ಮತ್ತು ಬೈರುತ್‌ನಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರ ಹತ್ಯೆಗಳಿಗೆ ಪ್ರತಿಕ್ರಿಯೆಯಾಗಿ, ಅಕ್ಟೋಬರ್ 1ರಂದು ಇರಾನ್ ಇಸ್ರೇಲ್ ಕಡೆಗೆ ಸುಮಾರು 180 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿತ್ತು. ಈ ದಾಳಿಗೆ ತನ್ನ ದೇಶವು ಪ್ರತೀಕಾರ ತೀರಿಸುತ್ತದೆ ಎಂದು ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅಕ್ಟೋಬರ್ ಆರಂಭದಲ್ಲಿ ಪ್ರತಿಜ್ಞೆ ಮಾಡಿದ್ದರು. ಆದಾಗ್ಯೂ, ಇಸ್ರೇಲಿ ದಾಳಿಯ ಸಮಯವು ಇನ್ನೂ ಸ್ಪಷ್ಟವಾಗಿಲ್ಲ.

ಭಾನುವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ, ದಾಳಿಯು “ಶೀಘ್ರದಲ್ಲೇ ನಡೆಯುವುದು, ಈ ದಾಳಿ ಮಹತ್ವದ್ದಾಗಿದೆ ಎಂದು ಮಂತ್ರಿಗಳಿಗೆ ತಿಳಿಸಲಾಯಿತು ಎಂದು ಇಸ್ರೇಲ್‌ನ ಸರ್ಕಾರಿ ಸ್ವಾಮ್ಯದ ಕಾನ್ ಟಿವಿಯನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.