ಮಂದಿರ ಪುನರ್ನಿರ್ಮಾಣಕ್ಕೆ ದಶ ಲಕ್ಷ ರೂಪಾಯಿ ಮೀಸಲಿಟ್ಟ ಪಾಕಿಸ್ತಾನ

0
101

ಸನ್ಮಾರ್ಗ ವಾರ್ತೆ

ಕಾಲದ ಹೊಡೆತಕ್ಕೆ ಸಿಲುಕಿ ಜೀರ್ಣಾವಸ್ಥೆಗೆ ತಲುಪಿರುವ ಮಂದಿರವನ್ನು ಪುನರ್ನವೀಕರಿಸಲು ಪಾಕಿಸ್ತಾನ ನಿರ್ಧರಿಸಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಾರೋವಾಲ್ ಜಿಲ್ಲೆಯಲ್ಲಿರುವ ಸಫರ್ ವಾಲ್ ಪಟ್ಟಣದಲ್ಲಿ ಈ ಮಂದಿರ ಇದೆ. ಇದನ್ನು ಬಾವೊಲಿ ಸಾಹೇಬ್ ಮಂದಿರ ಎಂದು ಕರೆಯಲಾಗುತ್ತದೆ.

ದಶಲಕ್ಷ ಪಾಕಿಸ್ತಾನ ರೂಪಾಯಿಯನ್ನು ಈ ಮಂದಿರ ಪುನರ್ ನಿರ್ಮಾಣಕ್ಕೆ ಪಾಕಿಸ್ತಾನ ಸರಕಾರ ಮೀಸಲಿದೆ.

ರವಿ ನದಿಯ ತೀರದಲ್ಲಿ ಈ ಮಂದಿರವಿದ್ದು 1960ರಲ್ಲಿ ಇದರ ಬಾಗಿಲು ಮುಚ್ಚಲಾಗಿತ್ತು. ಪಾಕ್ ಸರಕಾರದ ಈ ನಿರ್ಧಾರವು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನಿಸಲಾಗುತ್ತಿದೆ ಎನ್ನುವ ಆರೋಪಕ್ಕೆ ಉತ್ತರವೆಂಬಂತೆ ಬಂದಿದೆ. ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಮತ್ತು ಅವರ ಧಾರ್ಮಿಕ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎನ್ನುವ ಆರೋಪ ಇದೆ. ಭಾರತೀಯ ಮಾಧ್ಯಮಗಳು ಇದನ್ನು ಆಗಾಗ ಬಿತ್ತರಿಸುತ್ತಲೂ ಇವೆ. ಇದೀಗ ಈ ಎಲ್ಲಕ್ಕೂ ಉತ್ತರ ಎಂಬಂತೆ ಪಾಕಿಸ್ತಾನದಿಂದ ಈ ಘೋಷಣೆ ಹೊರಬಿದ್ದಿದೆ.