ಮೋಟಿವೇಷನಲ್ ಸ್ಪೀಕರ್ ಮುನವ್ವರ್ ಝಮಾ ಬಂಧನ: ಧಾರ್ಮಿಕ ಭಾವನೆಯನ್ನು ಕೆರಳಿಸಿದ ಆರೋಪ

0
153

ಸನ್ಮಾರ್ಗ ವಾರ್ತೆ

ಮೋಟಿವೇಷನಲ್ ಸ್ಪೀಕರ್ ಮುನವ್ವರ್ ಝಮಾ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಧಾರ್ಮಿಕ ಭಾವನೆಯನ್ನು ಕೆರಳಿಸಿದ ಆರೋಪದಲ್ಲಿ ಈ ಬಂಧನ ನಡೆದಿದೆ.

ನಡೆದಿದ್ದೇನು?
ಅಕ್ಟೋಬರ್ 14ರಂದು ಸಿಕಂದರಾಬಾದಿನ ಮುತ್ಯಾಲಮ್ಮ ಮಂದಿರದಲ್ಲಿ ಸಲ್ಮಾನ್ ಸಲೀಂ ಠಾಕೂರ್ ಎಂಬಾತ ದಾಂಧಲೆ ನಡೆಸಿದ್ದ. ಮಹಾರಾಷ್ಟ್ರದಿಂದ ಹೈದರಾಬಾದಿಗೆ ಬಂದು ಆತ ಈ ಕೃತ್ಯ ಎಸಗಿದ್ದ. ಈತ ಮುನವ್ವರ್ ಝಮಾ ನಡೆಸಿಕೊಡುವ ಪರ್ಸನಾಲಿಟಿ ಡೆವಲಪ್ಮೆಂಟ್ ವರ್ಕ್ ಶಾಪ್ ನಲ್ಲಿ ಭಾಗವಹಿಸಿದ್ದ. ಈ ಪರ್ಸನಾಲಿಟಿ ಡೆವಲಪ್ಮೆಂಟ್ ಕಾರ್ಯಕ್ರಮ ಕಫಿಲ್ ಅಹ್ಮದ್ ಮತ್ತು ಅಬ್ದುಲ್ ರಶೀದ್ ಅವರ ಹೋಟೆಲ್ ನ ಕೋಣೆಯಲ್ಲಿ ನಡೆದಿತ್ತು. ಆದ್ದರಿಂದ ಮುನವ್ವರ್ ಝಮಾ ಅವರ ಜೊತೆ ಈ ಮಾಲೀಕರನ್ನು ಕೂಡ ಬಂಧಿಸಲಾಗಿದೆ.

ಈ ಹೋಟೆಲ್ ಮಾಲೀಕರು ಅಕಾಡೆಮಿಕ್ ಕೋರ್ಸ್ ಅನ್ನು ನಡೆಸುವುದಕ್ಕೆ ಕಾನೂನು ಬಾಹಿರವಾಗಿ ತಮ್ಮ ಹೊಟೇಲಿನಲ್ಲಿ ಅನುಮತಿ ಕೊಟ್ಟಿದ್ದರು ಎಂದು ಪೋಲೀಸರು ಹೇಳಿದ್ದಾರೆ.

ಆದರೆ ಈ ಹೋಟೆಲ್ ಮೇಲೆ ಕೈಗೊಂಡಿರುವ ಕ್ರಮವನ್ನು ತೆಲಂಗಾಣ ನ್ಯಾಯಾಲಯ ರದ್ದು ಪಡಿಸಿದೆ. ಪೊಲೀಸರು ಪಕ್ಷಪಾತಿತನದಿಂದ ನಡಕೊಂಡಿದ್ದಾರೆ ಮತ್ತು ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಹೋಟೆಲ್ ಮಾಲೀಕ ಅಬ್ದುಲ್ ರಶೀದ್ ಅವರು ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಇದೇ ವೇಳೆ ಮುನವ್ವರ್ ಝಮಾ ಅವರ ಬಂಧನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಸಮುದಾಯದ ನಡುವೆ ಸದಾ ದ್ವೇಷವನ್ನು ಬಿತ್ತುವ ಮಾಧವಿ ಲತ ಅವರನ್ನು ಬಂಧಿಸದ ಪೊಲೀಸರು ಯುವ ಸಮೂಹ ಮತ್ತು ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಆಲೋಚನೆಯನ್ನು ತುಂಬುವ ಮುನವ್ವರ್ ಝಮಾ ಅವರನ್ನು ಬಂಧಿಸಿರುವುದು ನಾಚಿಕೆಗೇಡು ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇಂಗ್ಲೀಷ್ ಹೌಸ್ ಅಕಾಡೆಮಿಯ ಸ್ಥಾಪಕರಾಗಿರುವ ಮುನವ್ವರ್ ಝಮಾ ಅವರು ವ್ಯಕ್ತಿತ್ವ ವಿಕಸನದ ತರಬೇತುದಾರರಾಗಿ ಗುರುತಿಸಿಕೊಂಡಿದ್ದಾರೆ. ಹಾಗೆಯೇ ಮೋಟಿವೇಷನಲ್ ಸ್ಪೀಕರ್ ಆಗಿಯೂ ಪ್ರಸಿದ್ಧರಾಗಿದ್ದಾರೆ. ಇಂಗ್ಲಿಷ್ ಹೌಸ್ ಅಕಾಡೆಮಿಯು ಈ ವರೆಗೆ ಮೂರು ಲಕ್ಷ ಮಂದಿಗೆ ತರಬೇತಿ ನೀಡಿದೆ ಎಂದು ಹೇಳಲಾಗಿದೆ. ಮುನವ್ವರ್ ಝಮಾ ಅವರು ವ್ಯಕ್ತಿತ್ವ ವಿಕಸನ ಕಾರ್ಯಾಗಾರಗಳನ್ನು ಶಾಲೆ ಕಾಲೇಜು ಯುನಿವರ್ಸಿಟಿ ಮತ್ತು ಇನ್ನಿತರ ಕಡೆಗಳಲ್ಲಿ ಆಯೋಜಿಸುತ್ತಿದ್ದಾರೆ.