ದುಬಾಯಿಯಲ್ಲಿದ್ದೀರಾ? ಜಾಗ್ರತೆ, 30 ದಿನಗಳ ಕಾಲ ನಿಮ್ಮ ವಾಹನ ಜಪ್ತಿಯಾದೀತು..

0
111

ಸನ್ಮಾರ್ಗ ವಾರ್ತೆ

ಡ್ರೈವಿಂಗ್ ನಲ್ಲಿ ಇರುವಾಗ ಮೊಬೈಲ್ ಫೋನ್ ಬಳಸುವುದು ಇತ್ತಿತ್ತಲಾಗಿ ಹೆಚ್ಚಾಗುತ್ತಿದೆ. ಅದು ಅಪಘಾತಕ್ಕೂ ಕಾರಣವಾಗುತ್ತಿದೆ. ಇದೀಗ ದುಬೈ ಪೋಲಿಸರು ಈ ಕುರಿತಂತೆ ಕಠಿಣ ಕ್ರಮಗಳಿಗೆ ಮುಂದಾಗಿದ್ದಾರೆ.

ಡ್ರೈವಿಂಗ್ ನಲ್ಲಿ ಇರುವಾಗ ಮೊಬೈಲ್ ಉಪಯೋಗಿಸಿದವರ ವಾಹನವನ್ನು 30 ದಿವಸಗಳ ಕಾಲ ಜಪ್ತಿ ಮಾಡುವ ಹೊಸ ನಿಯಮವನ್ನು ಜಾರಿಗೆ ತರಲು ಉದ್ದೇಶಿಸಿದ್ದಾರೆ.

ಜೀವಕ್ಕೆ ಕುತ್ತು ತರುವ ರೀತಿಯಲ್ಲಿ ತಕ್ಷಣ ವಾಹನದ ಪಥ ಬದಲಿಸಿದರೆ ಮತ್ತು ಮುಂದಿರುವ ವಾಹನದ ಮಧ್ಯೆ ನಿಗದಿತ ಅಂತರವನ್ನು ಕಾಯ್ದುಕೊಳ್ಳದಿದ್ದರೆ 30 ದಿವಸಗಳ ಕಾಲ ವಾಹನವನ್ನು ಜಪ್ತಿ ಮಾಡಲಾಗುವುದು.

ರಸ್ತೆ ಸುರಕ್ಷಿತತೆಯನ್ನು ಲೆಕ್ಕಿಸದೆ ತಕ್ಷಣ ಒಳ ರಸ್ತೆಯಿಂದ ಮುಖ್ಯ ರಸ್ತೆಗೆ ಪ್ರವೇಶಿಸಿದರೆ 14 ದಿನಗಳ ಕಾಲ ವಾಹನವನ್ನು ಜಪ್ತಿ ಮಾಡಲಾಗುವುದು. ಹಾಗೆಯೇ ಲೈನ್ ನಿಯಮವನ್ನು ಪಾಲಿಸದಿದ್ದರೆ ಮತ್ತು ಅನಿವಾರ್ಯ ಕಾರಣಗಳಿಲ್ಲದೆ ರಸ್ತೆಯಲ್ಲಿ ವಾಹನ ನಿಲ್ಲಿಸಿದರೂ 14 ದಿನಗಳ ಕಾಲ ವಾಹನವನ್ನು ಜಪ್ತಿ ಮಾಡಲಾಗುವುದು. ಹಾಗೆಯೇ ನಿರ್ದಿಷ್ಟ ಲೈನ್ ಪಾಲಿಸದ ಘನ ವಾಹನಗಳನ್ನು 30 ದಿನಗಳ ಕಾಲ ಜಪ್ತಿ ಮಾಡಲಾಗುವುದು ಎಂದು ತಿಳಿಸಲಾಗಿದೆ.