ಅಲ್ ಜಝೀರ ಚಾನೆಲ್ ಪತ್ರಕರ್ತರನ್ನು ಹಮಾಸ್ ಏಜೆಂಟ್ ಎಂದು ಕರೆದ ಇಸ್ರೇಲ್: ಸತ್ಯವನ್ನು ಕೊಲ್ಲುವ ಯತ್ನ ಎಂದ ಅಲ್ ಜಝೀರಾ

0
64

ಸನ್ಮಾರ್ಗ ವಾರ್ತೆ

ಗಾಝಾದಲ್ಲಿ ಕೆಲಸ ಮಾಡುತ್ತಿರುವ ಅಲ್ ಜಝೀರ ಚಾನೆಲ್ ನ ಆರು ಮಂದಿ ಜರ್ನಲಿಷ್ಟುಗಳು ಹಮಾಸ್ ಮತ್ತು ಫೆಲೆಸ್ತೀನ್ ಇಸ್ಲಾಮಿಕ್ ಜಿಹಾದ್ ನ ಸದಸ್ಯರಾಗಿದ್ದಾರೆ ಎಂಬ ಇಸ್ರೇಲ್ ಹೇಳಿಕೆಯನ್ನು ಅಲ್ ಜಝೀರ ತೀವ್ರವಾಗಿ ಖಂಡಿಸಿದೆ.

ಅಲ್ ಜಝೀರಾದ ಪತ್ರಕರ್ತರನ್ನು ಹಮಾಸ್ ನ ಏಜೆಂಟರು ಎಂದು ಇಸ್ರೇಲ್ ಆರ್ಮಿ ತನ್ನ ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲಿ ತಿಳಿಸಿತ್ತು.

ಅನಸ್ ಅಲ್ ಶರೀಫ್, ತಲಾಲ್ ಅರೋಕಿ, ಅಲಾ ಸಲಾಮ, ಹುಸಾಮ್ ಶಭಾತ್, ಇಸ್ಮಾಯಿಲ್ ಫರೀದ್ ಮತ್ತು ಅಶ್ರಫ್ ಸರಾಜ್ ಅವರನ್ನು ಹಮಾಸ್ ನ ಏಜೆಂಟರಾದ ಪತ್ರಕರ್ತರು ಎಂದು ಇಸ್ರೇಲ್ ಹೇಳಿಕೊಂಡಿತ್ತು.

ಆದರೆ ಅಲ್ ಜಝೀರ ಈ ಆರೋಪವನ್ನು ಬಲವಾಗಿ ನಿರಾಕರಿಸಿದೆ. ಇಸ್ರೇಲ್ ಎಂದಿನಂತೆ ಸುಳ್ಳು ಸುದ್ದಿಯನ್ನು ಹರಡುವುದು ಮತ್ತು ಪತ್ರಕರ್ತರ ವರ್ಚಸ್ಸಿಗೆ ಹಾನಿ ಮಾಡುವುದನ್ನು ಮುಂದುವರಿಸಿದೆ ಎಂದು ಅದು ಹೇಳಿದೆ. ಸತ್ಯವನ್ನು ಹೇಳಬಲ್ಲ ಕೆಲವೇ ಕೆಲವು ಪತ್ರಕರ್ತರ ಬಾಯಿ ಮುಚ್ಚಿಸುವುದೇ ಇಸ್ರೇಲ್ ನ ಉದ್ದೇಶ ಎಂದು ಅದು ಬಲವಾಗಿ ತಿರುಗೇಟು ನೀಡಿದೆ.