ಅಮೇರಿಕಾದ ಇಸ್ರೇಲ್ ಪರ ನೀತಿಯನ್ನು ಖಂಡಿಸುವ ತನ್ನದೇ ಪಕ್ಷದ ನಾಯಕನನ್ನು ಕ್ಯಾಂಪೇನ್ ನಿಂದ ಹೊರಗಿಟ್ಟ ಕಮಲ ಹಾರಿಸ್: ವಿವಾದದ ಬಳಿಕ ಕ್ಷಮಾಯಾಚನೆ

0
87

ಸನ್ಮಾರ್ಗ ವಾರ್ತೆ

ಗಾಝಾ ದಲ್ಲಿ ಜನಾಂಗ ಹತ್ಯೆ ನಡೆಸ್ತಾ ಇರುವ ಇಸ್ರೇಲ್ ಗೆ ಅಮೆರಿಕ ನೀಡುತ್ತಿರುವ ಬೆಂಬಲವನ್ನು ವಿರೋಧಿಸುತ್ತಿರುವ ಡೆಮಾಕ್ರೆಟಿಕ್ ಪಾರ್ಟಿಯ ಮುಖಂಡನನ್ನು ಅಮೆರಿಕಾದ ಅಧ್ಯಕ್ಷೀಯ ಅಭ್ಯರ್ಥಿ ಕಮಲ ಹಾರಿಸ್ ಅವರ ಸಭೆಯಿಂದ ಹೊರಗೆ ಕಳುಹಿಸಲಾಗಿದೆ. ಕಮಲ ಹ್ಯಾರಿಸ್ ಅವರ ಪಕ್ಷದವರೇ ಆಗಿರುವ ಮತ್ತು ಮೆಟ್ರೋ ಡಿಟ್ರೋಯಿಟ್ ನಗರದ ಪ್ರಮುಖ ನಾಯಕನೂ ಆಗಿರುವ ಅಹಮದ್ ಶನಿಮ್ ಅವರನ್ನ ಹೀಗೆ ಸಭೆಯಿಂದ ಹೊರಗಟ್ಟಲಾಗಿದೆ.

ಕಮಲ ಹಾರಿಸ್ ರ ಸಭೆಗೆ ತನಗೆ ಆಮಂತ್ರಣ ನೀಡಲಾಗಿತ್ತು, ಆ ಕಾರಣಕ್ಕಾಗಿ ನಾನು ಸಭೆಗೆ ಹೋಗಿದ್ದೆ. ಆದರೆ ಕಾರ್ಯಕ್ರಮ ಪ್ರಾರಂಭವಾಗುವುದಕ್ಕಿಂತ ತುಸು ಮೊದಲು ಸಭೆಯ ಆಯೋಜಕರಲ್ಲಿ ಒಬ್ಬರು ಯಾವ ಕಾರಣವನ್ನೂ ನೀಡದೆ ತನ್ನನ್ನು ಹೊರ ಹೋಗಲು ಹೇಳಿದರು ಎಂದವರು ಹೇಳಿದ್ದಾರೆ.

ಕಮಲ ಹಾರಿಸ್ ಅವರಿಗೆ ಮುಸ್ಲಿಮರ ಮತ್ತು ಅರಬ್ ಅಂಶಜರ ಮತ ಬೇಕಿದೆ. ಆದರೆ ಅವರ ಸಭೆಯಲ್ಲಿ ಭಾಗವಹಿಸುವುದಕ್ಕೂ ಅನುಮತಿ ನೀಡುತ್ತಿಲ್ಲ. ಓರ್ವ ಪ್ರಮುಖ ನಾಯಕನಾಗಿಯೇ ನನ್ನ ಸ್ಥಿತಿ ಹೀಗಾದರೆ ಉಳಿದವರ ಸ್ಥಿತಿ ಹೇಗಿರಬಹುದು ಎಂದು ಗನೀಮ್ ಪ್ರಶ್ನಿಸಿದ್ದಾರೆ. ಈ ಸಭೆ ನಡೆದ ಪ್ರದೇಶವು ಮುಸ್ಲಿಮರು ಮತ್ತು ಅರಬ್ ಅಮೆರಿಕನ್ನರ ಬಾಹುಳ್ಯ ವಿರುವ ಪ್ರದೇಶವಾಗಿದೆ. ಇಸ್ರೇಲ್ ಅನ್ನು ಬೆಂಬಲಿಸುತ್ತಿರುವ ಕಮಲ ಹಾರಿಸ್ ವಿರುದ್ಧ ಅರಬ್ ವಂಶದರಲ್ಲಿ ತೀವ್ರ ಸಿಟ್ಟಿದೆ. ಈ ಸಿಟ್ಟನ್ನು ದೂರ ಮಾಡುವುದಕ್ಕಾಗಿಯೇ ನಡೆಸಲಾದ ಸಭೆಯಲ್ಲಿ ಹೀಗೆ ನಡೆದಿದೆ ಎಂದು ಗನೀಮ್ ಹೇಳಿದ್ದಾರೆ.

ಪ್ರಕರಣ ವಿವಾದ ಸ್ವರೂಪವನ್ನು ಪಡೆಯುವುದರೊಂದಿಗೆ ಕಮಲ ಹಾರಿಸ್ ಅವರ ಕ್ಯಾಂಪೈನ್ ವಕ್ತಾರರು ಗನೀಮ್ ಅವರಲ್ಲಿ ಕ್ಷಮೆಯಾಚಿಸಿದ್ದಾರೆ. ಇನ್ನು ಮುಂದಿನ ಸಭೆಗಳಲ್ಲಿ ಗನೀಮ್ ಅವರಿಗೆ ಇಂತಹ ಅನುಭವ ಆಗಲಾರದು ಎಂದು ಕೂಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದರೆ ಮಿಷಿಗನ್ ನ ಈ ಕ್ಯಾಂಪೈನ್ ಸಭೆಯಿಂದ ಗನೀಮ್ ಅವರನ್ನು ಹೊರ ಹಾಕಿರುವುದಕ್ಕೆ ಕಾರಣ ಏನು ಅನ್ನುವುದನ್ನು ಅವರು ಹೇಳಿಲ್ಲ.