ಕಮಲಾ ಹ್ಯಾರಿಸ್‌‌ಗಿಂತ ಟ್ರಂಪ್ ಮುನ್ನಡೆ; ಚುನಾವಣಾ ಪೂರ್ವ ಸಮೀಕ್ಷೆ

0
65

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ನವೆಂಬರ್ 5 ರಂದು ಅಮೆರಿಕಾದಲ್ಲಿ ಪ್ರಮುಖ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಇದಕ್ಕೆ ಮುನ್ನ ಹಲವು ಚುನಾವಣಾ ಪೂರ್ವ ಸಮೀಕ್ಷೆಗಳು ನಡೆದಿವೆ.

ಈ ಸಮೀಕ್ಷೆಗಳ ಪ್ರಕಾರ, ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರಿಗಿಂತ ಸ್ವಲ್ಪ ಮುನ್ನಡೆಯಲ್ಲಿದ್ದಾರೆ. ಈ ಮುನ್ನಡೆ ಚರ್ಚೆಗೆ ಕಾರಣವಾಗಿದ್ದು, ಚುನಾವಣಾ ಪ್ರಕ್ರಿಯೆ, ಅಭ್ಯರ್ಥಿಗಳ ನಿಲುವುಗಳು ಹಾಗೂ ಅಮೆರಿಕದ ಜನತೆಯ ಮನಸ್ಥಿತಿ ಈ ಸಮೀಕ್ಷೆಗಳ ಮೂಲಕ ಅರ್ಥಗತವಾಗುತ್ತಿದೆ.

ವಾಲ್‌ಸ್ಟ್ರೀಟ್ ಜರ್ನಲ್‌ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ, ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ ಅವರು ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್‌ಗಿಂತ ಶೇಕಡಾ 2 ಪಾಯಿಂಟ್‌ಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಸಮೀಕ್ಷೆಯಲ್ಲಿ ಶೇಕಡಾ 47 ರಷ್ಟು ಮತದಾರರು ಟ್ರಂಪ್‌ ಪರ ಇದ್ದರೆ, ಶೇಕಡಾ 45 ರಷ್ಟು ಮತದಾರರು ಕಮಲಾ ಹ್ಯಾರಿಸ್ ಅವರ ಪರ ಮತದಾನ ಮಾಡುವ ಉದ್ದೇಶ ವ್ಯಕ್ತಪಡಿಸಿದ್ದಾರೆ.

ಸಿಎನ್‌ಬಿಸಿ ಆಲ್ ಅಮೆರಿಕ ಸಮೀಕ್ಷೆಯ ಪ್ರಕಾರ, ಟ್ರಂಪ್ ಶೇಕಡಾ 48 ಅಂಶಗಳ ಮುನ್ನಡೆ ಕಾಯ್ದುಕೊಂಡಿದ್ದು, ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಶೇಕಡಾ 46 ಅಂಶಗಳ ಒಲವನ್ನು ಪಡೆದುಕೊಂಡಿದ್ದಾರೆ. ಪ್ರಮುಖ ಏಳು ರಾಜ್ಯಗಳಲ್ಲಿ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ. ಆದರೆ, ಪ್ರಮುಖ ರಾಷ್ಟ್ರೀಯ ಮತ್ತು ಪ್ರಾದೇಶಿಕ ಸಮೀಕ್ಷೆಗಳನ್ನು ವಿಶ್ಲೇಷಿಸುತ್ತಿರುವ RealClearPolitics ಪ್ರಕಾರ, ರಾಷ್ಟ್ರೀಯ ಮಟ್ಟದಲ್ಲಿ ಕಮಲಾ ಹ್ಯಾರಿಸ್ ಶೇಕಡಾ 0.3 ಅಂಶಗಳಷ್ಟು ಮುನ್ನಡೆ ಹೊಂದಿದ್ದಾರೆ.