ಗುಜರಾತ್: ಮುಸ್ಲಿಂ ಧಾರ್ಮಿಕ ಕೇಂದ್ರಗಳ ನೆಲಸಮ ತಡೆಯಲು ಸುಪ್ರೀಂ ನಿರಾಕರಣೆ

0
180

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಗುಜರಾತ್‌ನ ಗಿರ್ ಸೋಮನಾಥದಲ್ಲಿ ಮುಸ್ಲಿಂ ಧಾರ್ಮಿಕ ಕೇಂದ್ರಗಳು ಮತ್ತು ಇತರ ಕಟ್ಟಡಗಳನ್ನು ಅಕ್ರಮವಾಗಿ ಕೆಡವಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಪೀಠವು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಪ್ರಾರಂಭದಲ್ಲಿ ಒಲವು ತೋರಿಸಿತ್ತು. ಆದರೆ ವಿಚಾರಣೆ ಮುಂದುವರಿದಂತೆ, ಈ ಹಂತದಲ್ಲಿ ಅಂತಹ ಆದೇಶದ ಅಗತ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮುಸ್ಲಿಂ ಪಕ್ಷದ ಪರ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಆಸ್ತಿಗಳು ವಕ್ಫ್ ಭೂಮಿಗೆ ಸೇರಿದ್ದು, ರಾಜ್ಯ ಸರ್ಕಾರ ಯಾವುದೇ ಮೂರನೇ ಪಕ್ಷಕ್ಕೆ ಅದರ ಹಕ್ಕುಗಳನ್ನು ನೀಡಬಾರದು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಯಾಗಿ, ಗುಜರಾತ್ ಸರ್ಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಆಸ್ತಿಗಳು ಸರ್ಕಾರಿ ಭೂಮಿಯಾಗಿದ್ದು, ಅರ್ಜಿದಾರರಾದ ಔಲಿಯಾ-ಇ-ದೀನ್ ಸಮಿತಿಯ ಹೆಸರಿನಲ್ಲಿ ಏನೂ ಇಲ್ಲ ಎಂದು ವಾದಿಸಿದರು.

ಮಧ್ಯಂತರ ತಡೆಯಾಜ್ಞೆಯನ್ನು ಉಲ್ಲಂಘಿಸಿ ಧಾರ್ಮಿಕ ಮತ್ತು ವಸತಿ ಕಟ್ಟಡಗಳನ್ನು ಅಕ್ರಮವಾಗಿ ಧ್ವಂಸ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಗುಜರಾತ್ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಯುತ್ತಿದೆ.