34 ಕೋಟಿ ರೂಪಾಯಿ ಸಂಗ್ರಹವಾದ ಕೊಯ್ಕೋಡಿನ ಅಬ್ದುಲ್ ರಹೀಮ್ ಗಲ್ಲು ಶಿಕ್ಷೆಯಿಂದ ಪಾರಾದರೇ? ಇಲ್ಲಿದೆ ಫಾಲೋ ಅಪ್ ಸುದ್ದಿ

0
355

ಸನ್ಮಾರ್ಗ ವಾರ್ತೆ

ಸೌದಿಯಲ್ಲಿ ಗಲ್ಲು ಶಿಕ್ಷೆ ನೀಡಲಾಗಿದ್ದ ಕೇರಳದ ಕೊಯ್ಕೋಡಿನ ಅಬ್ದುಲ್ ರಹೀಮ್ ಅವರ ಬಗ್ಗೆ ತಿಂಗಳುಗಳ ಹಿಂದೆ ಸಾಕಷ್ಟು ಚರ್ಚೆಯಾಗಿತ್ತು. ಅವರ ಬಿಡುಗಡೆಗಾಗಿ 34 ಕೋಟಿ ರೂಪಾಯಿಯನ್ನು ಕೇರಳಿಗರು ಸಂಗ್ರಹಿಸಿ ಎಲ್ಲರನ್ನೂ ಹುಬ್ಬೇರುರುವಂತೆ ಮಾಡಿದ್ದರು. ಆ ಬಳಿಕ ಏನಾಯ್ತು ಅನ್ನುವ ಬಗ್ಗೆ ಕುತೂಹಲ ಇದ್ದದ್ದೇ. ಇದು ಅದರ ಫಾಲೋ ಅಪ್ ಸುದ್ದಿ.

ಈಗಾಗಲೇ ಅಬ್ದುಲ್ ರಹೀಮ್ ಅವರ ಗಲ್ಲು ಶಿಕ್ಷೆಯನ್ನು ನ್ಯಾಯಾಲಯ ರದ್ದು ಪಡಿಸಿದೆ. ಆದರೆ ಅವರೀಗಲೂ ಜೈಲಲ್ಲೇ ಇದ್ದಾರೆ. ಇದೀಗ ಗಲ್ಲು ಶಿಕ್ಷೆ ರದ್ದುಪಡಿಸಿದ ಅದೇ ನ್ಯಾಯಾಂಗ ಪೀಠವು ನವೆಂಬರ್ 17ರಂದು ಅಬ್ದುಲ್ ರಹೀಮ್ ಅವರ ವಿಚಾರಣೆಗಾಗಿ ದಿನಾಂಕ ನಿಗದಿಪಡಿಸಿದೆ. ಈ ಮೊದಲು ವಿಚಾರಣೆಯ ದಿನಾಂಕವನ್ನು ನವೆಂಬರ್ 21ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಪ್ರತಿವಾದಿಗಳು ಅಪೇಕ್ಷಿಸಿದ ಕಾರಣದಿಂದಾಗಿ 17ಕ್ಕೆ ನಿಗದಿಪಡಿಸಲಾಗಿದೆ. ಈ ವಿಚಾರಣೆಯಲ್ಲಿ ರಹೀಮ್ ಅವರ ಜೈಲು ಮುಕ್ತಿಯಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

ಸೌದಿ ನಾಗರಿಕನೋರ್ವನನ್ನು ಹತ್ಯೆಗೈದ ಪ್ರಕರಣದಲ್ಲಿ ಅಬ್ದುಲ್ ರಹೀಮ್ ಅವರಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು.