ವಿಜ್ಞಾನ, ಗಣಿತ ಕ್ಷೇತ್ರಕ್ಕೆ ಇಸ್ಲಾಮಿನ ಕೊಡುಗೆ ಅನನ್ಯ: ರಾಝಿ, ಇಬ್ನು ಸೀನಾರನ್ನು ನೆನಪಿಸಿಕೊಂಡ ಎಲೊನ್ ಮಸ್ಕ್

0
211

ಸನ್ಮಾರ್ಗ ವಾರ್ತೆ

ವೈಜ್ಞಾನಿಕ ರಂಗಕ್ಕೆ ಇಸ್ಲಾಂ ನೀಡಿರುವ ಕೊಡುಗೆಯನ್ನು ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ನ ಸ್ಥಾಪಕ ಮತ್ತು ಎಕ್ಸ್ ಜಾಲತಾಣದ ಮಾಲಕ ಎಲೋನ್ ಮಸ್ಕ್ ಶ್ಲಾಘಿಸಿದ್ದಾರೆ. ಮಾನವ ಸಮೂಹದ ಅಭಿವೃದ್ಧಿಗೆ ಇಸ್ಲಾಮಿ ಕಾಲದ ವೈಜ್ಞಾನಿಕ ಸಂಶೋಧನೆಗಳು ಬಹಳ ದೊಡ್ಡ ಕೊಡುಗೆಯನ್ನು ನೀಡಿವೆ, ರೋಮನ್ ಸಾಮ್ರಾಜ್ಯದ ಪತನದ ಬಳಿಕ ಇಸ್ಲಾಮಿ ಖಿಲಾಫತ್ ನ ಕಾಲದಲ್ಲಿ ಜ್ಞಾನದ ಭಂಡಾರಗಳು ಅಪಾರವಾಗಿ ತೆರೆದುವು ಎಂದವರು ಹೇಳಿದ್ದಾರೆ.

ಮಧ್ಯೇಶಿಯ ಪರ್ಶಿಯಾ ಮತ್ತು ಇಸ್ಲಾಮಿ ರಾಷ್ಟ್ರವಾಗಿದ್ದ ಸ್ಟ್ರೇನ್ ಗಳಲ್ಲಿ ಎಂಟರಿಂದ 14ನೇ ಶತಮಾನದ ಅವಧಿಯಲ್ಲಿ ಸೈನ್ಸ್ ಟೆಕ್ನಾಲಜಿ ಮತ್ತು ಸಂಸ್ಕೃತಿಯ ವಿಷಯದಲ್ಲಿ ಅಭೂತಪೂರ್ವ ಬೆಳವಣಿಗೆಯನ್ನ ಕಂಡಿದೆ ಎಂದವರು ಹೇಳಿದ್ದಾರೆ.

ಈ ಕಾಲದಲ್ಲಿ ಇಬ್ನು ಸೀನಾ, ಅಲ್ ರಾಜಿ ಮತ್ತು ಅಲ್ ಕವಾರಿಝಿ ಮುಂತಾದ ಜಗತ್ಪ್ರಸಿದ್ಧ ವಿದ್ವಾಂಸರು ತಯಾರಾದರು. ಮೆಡಿಸಿನ್ ಮತ್ತು ಗಣಿತ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆಯನ್ನು ಈ ಅವಧಿಯ ಮುಸ್ಲಿಂ ವಿದ್ವಾಂಸರು ನೀಡಿದರು. ಇವರ ಕೊಡುಗೆಯಿಂದಾಗಿ ಜಗತ್ತು ಬಹಳ ದೊಡ್ಡ ಉಪಕಾರವನ್ನು ಪಡೆಯಿತು ಎಂದವರು ಹೇಳಿದ್ದಾರೆ.