ಗಾಝಾದಲ್ಲಿ ಹತ್ಯೆಗೀಡಾದವರಿಗೆ ಪ್ರಾರ್ಥನಾ ಸಭೆ: ತನ್ನಿಬ್ಬರು ಉದ್ಯೋಗಿಗಳನ್ನು ಹೊರಹಾಕಿದ ಮೈಕ್ರೋಸಾಫ್ಟ್

0
208

ಸನ್ಮಾರ್ಗ ವಾರ್ತೆ

ಗಾಝಾದಲ್ಲಿ ಹತ್ಯೆಗೀಡಾದ ಫೆಲೆಸ್ತೀನಿಯರಿಗಾಗಿ ಪ್ರಾರ್ಥನಾ ಸಭೆಯನ್ನು ನಡೆಸಿದ ತನ್ನಿಬ್ಬರು ಉದ್ಯೋಗಿಗಳನ್ನು ಮೈಕ್ರೋಸಾಫ್ಟ್ ಕೆಲಸದಿಂದ ಬಿಡುಗಡೆಗೊಳಿಸಿದೆ.

ಅನುಮತಿ ಇಲ್ಲದೆ ಅವರು ಪ್ರಾರ್ಥನಾ ಸಭೆ ನಡೆಸಿದ್ದಾರೆ ಎಂದು ಮೈಕ್ರೋಸಾಫ್ಟ್ ಇದಕ್ಕೆ ಕಾರಣವನ್ನು ನೀಡಿದೆ. ಇಬ್ಬರಿಗೂ ಕರೆ ಮಾಡಿ ಅವರ ಬಿಡುಗಡೆಯನ್ನು ತಿಳಿಸಲಾಗಿದೆ ಎಂದು ವರದಿಯಾಗಿದೆ.

ಅಮೆರಿಕಾದ ವಾಷಿಂಗ್ ಟನ್ನಿನ ರೆಡ್ಮೊನ್ ಕ್ಯಾಂಪಸ್ ನಲ್ಲಿ ದುಡಿಯುತ್ತಿದ್ದ ಈ ಇಬ್ಬರನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ.

ಮೈಕ್ರೋಸಾಫ್ಟ್ ತಮ್ಮ ಕ್ರೌಡ್ ಕಂಪ್ಯೂಟರ್ ಟೆಕ್ನಾಲಜಿಯನ್ನು ಇಸ್ರೇಲ್ ಗೆ ಮಾರುವುದನ್ನು ವಿರೋಧಿಸುತ್ತಿದ್ದವರೇ ಈ ಪ್ರಾರ್ಥನಾ ಸಭೆಯನ್ನು ಏರ್ಪಡಿಸಿದ್ದರು ಎಂದು ವರದಿಯಾಗಿದೆ. ಇದೇ ವೇಳೆ ನಮ್ಮ ಅನುಮತಿ ಇಲ್ಲದೆ ಅವರು ಪ್ರಾರ್ಥನಾ ಸಭೆಯನ್ನು ಏರ್ಪಡಿಸಿದ್ದಾರೆ ಎಂದು ಮೈಕ್ರೋಸಾಫ್ಟ್ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.

ಹೀಗೆ ಬಿಡುಗಡೆಗೊಳಿಸಿದವರಲ್ಲಿ ಒಬ್ಬರ ಹೆಸರು ಮುಹಮ್ಮದ್ ರಷಾದ್. ಇವರು ಈಜಿಪ್ಟಿನವರಾಗಿದ್ದಾರೆ. ಮುಂದಿನ ಎರಡು ತಿಂಗಳೊಳಗೆ ಅವರು ಹೊಸ ಉದ್ಯೋಗವನ್ನು ಹುಡುಕಬೇಕಾಗಿದೆ. ಇನ್ನೊಬ್ಬರ ಹೆಸರು ಹುಸಮ್ ನಸೀರ್. 2021 ರಲ್ಲಿ ಹಾರ್ವರ್ಡ್ ಯುನಿವರ್ಸಿಟಿಯಿಂದ ಪದವಿ ಪಡೆದ ವ್ಯಕ್ತಿಯಾಗಿದ್ದಾರೆ ಇವರು.