ಐರ್ಲೆಂಡ್‌; ಮುಚ್ಚಲಾದ ಇಸ್ರೇಲ್ ರಾಯಭಾರಿ ಕಚೇರಿ ಈಗ ಫೆಲೆಸ್ತೀನ್ ಮ್ಯೂಸಿಯಮ್‌

0
1070

ಸನ್ಮಾರ್ಗ ವಾರ್ತೆ

ಡಬ್ಲಿನ್: ಐರ್ಲೆಂಡ್‌ನಲ್ಲಿ ಮುಚ್ಚಲಾದ ಇಸ್ರೇಲ್ ರಾಯಭಾರಿ ಕಚೇರಿಯನ್ನು ಫೆಲೆಸ್ತೀನ್ ಮ್ಯೂಸಿಯಮ್‌ ಆಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ. ಐರ್ಲೆಂಡ್‌ನ ರಾಜಧಾನಿ ಡಬ್ಲಿನ್‌ನಲ್ಲಿ ಇರುವ ಈ ರಾಯಭಾರಿ ಕಚೇರಿ ಕಟ್ಟಡವನ್ನು ಈಗ ಫೆಲೆಸ್ತೀನ್ ಮ್ಯೂಸಿಯಮ್‌ ಆಗಿ ಪರಿವರ್ತಿಸಲಾಗುತ್ತಿದೆ. ಈ ಕಟ್ಟಡವನ್ನು ಹಿಂದೆಯೇ ಮುಚ್ಚಲಾಗಿತ್ತು.

ಅಮೆರಿಕಾದ ಕನೆಕ್ಟಿಕಟ್‌ನಲ್ಲಿ ಕೇಂದ್ರಸ್ಥಾನ ಹೊಂದಿರುವ ಪ್ಯಾಲೆಸ್ಟೈನ್ ಮ್ಯೂಸಿಯಮ್ ಅಧಿಕಾರಿಗಳು, ಇಸ್ರೇಲ್‌ನ ಮಾಜಿ ರಾಯಭಾರ ಕಚೇರಿಯನ್ನು ಬಾಡಿಗೆಗೆ ಪಡೆದು, ಈ ರೀತಿಯ ಒಂದು ಪ್ರಾರಂಭವನ್ನು ಕೈಗೊಳ್ಳಲು ನಿರ್ಧರಿಸಿದ್ದಾರೆ.

“ಡಬ್ಲಿನ್‌ನಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಯ ಹಳೆಯ ಕಚೇರಿಗಳನ್ನು ನಮ್ಮ ಶಾಶ್ವತ ಯುರೋಪಿಯನ್ ಕೇಂದ್ರವಾಗಿ ಪರಿವರ್ತಿಸಲು ನಾವು ಉತ್ಸಾಹದಿಂದ ಎದುರು ನೋಡುತ್ತಿದ್ದೇವೆ” ಎಂದು ಮ್ಯೂಸಿಯಮ್ ನಿರ್ದೇಶಕ ಫೈಸಲ್ ಸಲೀಹ್ ಹೇಳಿದ್ದಾರೆ.

ಈ ಮ್ಯೂಸಿಯಮ್ ಪ್ರಸ್ತುತ ಜಾಗತಿಕವಾಗಿ ಫೆಲೆಸ್ತೀನಿಯರ ಸಮಸ್ಯೆಗಳನ್ನು ಉತ್ತೇಜಿಸುವುದು ಮತ್ತು ಚರ್ಚೆಗೆ ಒಳಪಡಿಸುವ ಗುರಿಯನ್ನು ಹೊಂದಿರುವ ತಂಡವಾಗಿದೆ. ಸಂಸ್ಥೆಯು ಯುರೋಪ್‌ನಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಉದ್ದೇಶಿಸಿದೆ.

ಕಳೆದ ವಾರ, ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಇಸ್ರೇಲ್ ವಿರುದ್ಧದ ಜನಾಂಗೀಯ ಹತ್ಯೆಯ ಪ್ರಕರಣವನ್ನು ಐರ್ಲೆಂಡ್ ಬೆಂಬಲಿಸಿದ ಹಿನ್ನೆಲೆಯಲ್ಲಿ, ಪ್ರತಿಭಟನೆಯ ರೂಪವಾಗಿ ಇಸ್ರೇಲ್ ಅಧಿಕಾರಿಗಳು ಡಬ್ಲಿನ್ ರಾಯಭಾರ ಕಚೇರಿಯನ್ನು ಮುಚ್ಚಲು ನಿರ್ಧರಿಸಿದರು.