ಯೇಸುರವರ ಆಶಯದಂತೆ ಬಾಳುವುದು ನಮ್ಮೆಲ್ಲರ ಹೊಣೆಗಾರಿಕೆ; ಕ್ರಿಸ್ಮಸ್ ಶುಭಾಶಯ ಕೋರಿದ ಮೋದಿ

0
537

ಸನ್ಮಾರ್ಗ ವಾರ್ತೆ

ದೇಶದಾದ್ಯಂತ ಕ್ರೈಸ್ತ ಬಾಂಧವರು ಕ್ರಿಸ್‌ಮಸ್‌ ಹಬ್ಬವನ್ನು ಸಡಗರದಿಂದ ಆಚರಿಸಿದ್ದು, ಚರ್ಚ್‌ಗಳಿಗೆ ತೆರಳಿ ವಿಶೇಷ ಪ್ರಾರ್ಥನೆಗಳಲ್ಲಿ ಭಾಗಿಯಾಗಿದ್ದಾರೆ.

ಈ ಹಬ್ಬದ ಸಂದರ್ಭದಲ್ಲಿ ಏಕತೆಯ ಸಂದೇಶವನ್ನು ಹಂಚಿಕೊಂಡು, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಮುಖರಾದವರು ಕ್ರಿಸ್ಮಸ್‌ ಶುಭಾಶಯಗಳನ್ನು ವ್ಯಕ್ತಪಡಿಸಿದ್ದಾರೆ.

ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಹಲವು ಮುಖಂಡರು ತಮ್ಮ ಸಂದೇಶಗಳನ್ನು ಹಂಚಿಕೊಂಡಿದ್ದು, ಯೇಸು ಕ್ರಿಸ್ತನ ಸಹಿಷ್ಣುತೆ, ಪ್ರೀತಿ, ಮತ್ತು ಶಾಂತಿಯ ಮಾರ್ಗದಲ್ಲಿ ಸಾಗುವಂತೆ ಕರೆ ನೀಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನವದೆಹಲಿಯಲ್ಲಿ ಕ್ಯಾಥೋಲಿಕ್ ಬಿಷಪ್ಸ್ ಕಾನ್ಸರೆನ್ಸ್ ಆಫ್ ಇಂಡಿಯಾ ಆಯೋಜಿಸಿದ್ದ ಕ್ರಿಸ್‌ಮಸ್‌ ಸಮಾರಂಭದಲ್ಲಿ ಭಾಗವಹಿಸಿ ಶುಭಕೋರಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, “ಯೇಸು ಕ್ರಿಸ್ತನ ಆಶಯದಂತೆ ಸಹೋದರತೆ, ಸಮಾನತೆ, ಪ್ರೀತಿ ಹಾಗೂ ಬಾತೃತ್ವದಿಂದ ಬಾಳುವುದು ನಮ್ಮೆಲ್ಲರ ಹೊಣೆಗಾರಿಕೆ” ಎಂದು ಹೇಳಿದರು.

ಕ್ರಿಸ್‌ಮಸ್ ಹಬ್ಬವು ವಿಶ್ವದಾದ್ಯಂತ ಶಾಂತಿ, ಪ್ರೀತಿ, ಮತ್ತು ಸಹಾನುಭೂತಿಯೊಂದಿಗೆ ಆಚರಿಸಲಾಗುತ್ತಿದೆ.