ಸನ್ಮಾರ್ಗ ವಾರ್ತೆ
ಜೆರುಸಲೇಮ್: ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧವನ್ನು ವಿರೋಧಿಸಲು, ಜೆರುಸಲೇಮ್ನ ಬೆತ್ಲೆಹೆಮ್ ಗವರ್ನರೆಟ್ ಸತತ ಎರಡನೇ ವರ್ಷವೂ ಕ್ರಿಸ್ತನ ಜನ್ಮ ಸ್ಥಳದಲ್ಲಿ ಕ್ರಿಸ್ಮಸ್ ಆಚರಣೆಯನ್ನು ಕೈಬಿಟ್ಟಿದೆ.
ಬೆತ್ಲೆಹೆಮ್ನ ಕ್ರಿಶ್ಚಿಯನ್ ಸಮುದಾಯವು ಸತತ ಎರಡನೇ ವರ್ಷವೂ ಈ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದೆ.
ಬೆತ್ಲೆಹೆಮ್ ಗವರ್ನರೇಟ್ ಕ್ರಿಸ್ಮಸ್ಗೆ ಕೆಲವು ದಿನಗಳ ಮುನ್ನ ಈ ರೀತಿಯ ಐತಿಹಾಸಿಕ ನಿರ್ಧಾರವನ್ನು ಘೋಷಿಸಿದೆ. ಈ ಕಾರಣದಿಂದ ನಗರದಲ್ಲಿನ ಯಾವುದೇ ಪ್ರಮುಖ ಸ್ಥಳಗಳಲ್ಲಿ ಕ್ರಿಸ್ಮಸ್ ಮರ, ನಕ್ಷತ್ರಗಳು ಅಥವಾ ಇತರ ಅಲಂಕಾರಗಳನ್ನು ಸಿದ್ಧಪಡಿಸಲಾಗಿಲ್ಲ.
ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್ನ ನರಮೇಧ ಮತ್ತು ವೆಸ್ಟ್ ಬ್ಯಾಂಕ್ನಲ್ಲಿ ಅಕ್ರಮ ವಸಾಹತುಗಳನ್ನು ವಿರೋಧಿಸಲು ಪ್ಯಾಲೆಸ್ಟಿನಿಯನ್ ರೆವರೆಂಡ್ ಮುಂಥರ್ ಐಸಾಕ್ ಮತ್ತು ಯುಕೆಯಲ್ಲಿನ ಪ್ಯಾಲೆಸ್ಟೀನ್ ರಾಯಭಾರಿ ಹುಸ್ಸಾಮ್ ಝೊಮ್ಲೋಟ್ ಅವರು ಜಂಟಿ ಹೇಳಿಕೆಯ ಮೂಲಕ ಈ ಪ್ರಕಟಣೆಯನ್ನು ಹೊರಡಿಸಿದ್ದಾರೆ.
ಇಸ್ರೇಲ್ ಪ್ಯಾಲೆಸ್ಟೀನಿಯನ್ನರ ಹತ್ಯೆಯನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಗಾಜಾದಲ್ಲಿ ನಡೆಯುತ್ತಿರುವ ನರಮೇಧಕ್ಕೆ ಅಂತರಾಷ್ಟ್ರೀಯ ಸಮುದಾಯ ತುರ್ತು ಮಧ್ಯಸ್ಥಿಕೆಗೆ ಒಳಪಡಬೇಕು ಎಂಬುದಾಗಿ ಈ ಪ್ರಕಟಣೆ ಒತ್ತಿ ಹೇಳುತ್ತದೆ.












