ಸನ್ಮಾರ್ಗ ವಾರ್ತೆ
ಮುಂಬೈ: ಕಾಶಿಮಿರಾ ಪ್ರದೇಶದ ಕೊಳೆಗೇರಿಯಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆಯನ್ನು ಹಿಂದುತ್ವ ಕಾರ್ಯಕರ್ತರು ತಡೆದ ಘಟನೆಯ ವಿಡಿಯೋ ಚರ್ಚೆಗೆ ಗ್ರಾಸವಾಗಿದೆ.
ಮಕ್ಕಳ ಗುಂಪು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ, ಹಿಂದುತ್ವ ಕಾರ್ಯಕರ್ತರು, ಮಕ್ಕಳಿಗೆ “ನಾವು ಹಿಂದೂಗಳು” ಎಂದು ಹೇಳುವಂತೆ ಬಲವಂತ ಪಡಿಸಿದ್ದು, ನಂತರ ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗಿ, ಹನುಮಾನ್ ಚಾಲೀಸಾ ಪಠಿಸಲು ಒತ್ತಾಯಿಸಿದರು.
ಇದೇ ರೀತಿಯ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಶಾಲೆಯೊಂದರಲ್ಲಿ ನಡೆದಿದ್ದು, ಕ್ರಿಸ್ಮಸ್ ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಕಾರ್ಯಕರ್ತರು ತಡೆಯಲು ಯತ್ನಿಸಿದರು. “ಹಿಂದೂ ವಿದ್ಯಾರ್ಥಿಗಳ ಮೇಲೆ ಕ್ರೈಸ್ತ ಧರ್ಮದ ಪ್ರಚಾರ ನಡೆಯುತ್ತಿದೆ” ಎಂಬ ಆರೋಪದೊಂದಿಗೆ ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇರಳ ಘಟನೆಯಲ್ಲಿ ಮೂವರು ಕಾರ್ಯಕರ್ತರನ್ನು ಬಂಧಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಘಟನೆಗಳು ಧಾರ್ಮಿಕ ಸಾಮರಸ್ಯ ಕುರಿತ ಚರ್ಚೆಗಳಿಗೆ ಕಾರಣವಾಗಿದೆ.












