ನಿಮಿಷ ಪ್ರಿಯ ಎಂಬ ಮಹಿಳೆಗೆ ಯೆಮೆನ್‌ನಲ್ಲಿ ಮರಣದಂಡನೆ; ಕ್ಷಮೆ ನೀಡಲು ಕುಟುಂಬದ ಮನವಿ

0
660

ಸನ್ಮಾರ್ಗ ವಾರ್ತೆ

ಕೊಲ್ಲಂಗೋಡು: ನಿಮಿಷಪ್ರಿಯ ಎಂಬ ಭಾರತೀಯ ಮಹಿಳೆಗೆ ಯೆಮೆನ್ ನ್ಯಾಯಾಲಯ ಮರಣದಂಡನೆ ವಿಧಿಸಿದ್ದು, ಅವರ ಮರಣದಂಡನೆಯು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮರಣದಂಡನೆ ತೀರ್ಪಿಗೆ ಯೆಮನ್ ಅಧ್ಯಕ್ಷರು ಅನುಮತಿ ನೀಡಿದ್ದು, ಶೀಘ್ರದಲ್ಲಿ ಶಿಕ್ಷೆ ಜಾರಿಗೊಳ್ಳುವ ಸಾಧ್ಯತೆಯಿದೆ. ಕೊಲ್ಲಂಗೋಡು ಮೂಲದ ಪ್ರೇಮಾ ಅವರ ಪುತ್ರಿ ನಿಮಿಷಪ್ರಿಯರನ್ನು ಯೆಮನ್ ಪ್ರಜೆಯ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಘೋಷಿಸಲಾಗಿದೆ.

ನಿಮಿಷಪ್ರಿಯ ಮತ್ತು ಅವರ ಕುಟುಂಬ ಹತ್ತು ವರ್ಷಗಳ ಹಿಂದೆ ಯೆಮನ್‌ನಲ್ಲಿ ವಾಸಿಸುತ್ತಿದ್ದರು. ನಂತರ, ತಮ್ಮ ಮನೆ ಮಾರಾಟ ಮಾಡಿ ಕೇರಳದ ಎರ್ನಾಕುಲಂಗೆ ಸ್ಥಳಾಂತರಗೊಂಡರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರೂ, ನ್ಯಾಯಾಲಯದಲ್ಲಿ ಆಕೆ ತಪ್ಪಿತಸ್ಥೆ ಎಂದು ಸ್ಪಷ್ಟೀಕರಿಸಲಾಯಿತು.

ಮರಣದಂಡನೆ ತೀರ್ಪು ಪ್ರಕಟವಾದ ನಂತರ, ಅವರ ಕುಟುಂಬ ತೀವ್ರ ಕಳವಳ ವ್ಯಕ್ತಪಡಿಸಿದ್ದು, “ನಿಮಿಷಪ್ರಿಯಳನ್ನು ಕ್ಷಮಿಸಿ, ಮತ್ತೆ ತೀರ್ಪು ಪರಿಶೀಲನೆ ನಡೆಸಿ,” ಎಂದು ಭಾರತೀಯ ಸಮುದಾಯ ಮತ್ತು ಸ್ಥಳೀಯರು ಆಗ್ರಹಿಸಿದ್ದಾರೆ. ಈ ಮಧ್ಯೆ, ಭಾರತದ ವಿದೇಶಾಂಗ ವ್ಯವಹಾರ ಇಲಾಖೆ ಕೌಟುಂಬಿಕ ಮನವಿಗೆ ಸ್ಪಂದಿಸಿ, ತಮ್ಮ ಮಟ್ಟದಲ್ಲಿ ಹಸ್ತಕ್ಷೇಪ ಮಾಡುವ ಸಾಧ್ಯತೆಗಳಿಗಾಗಿ ಪ್ರಯತ್ನಿಸುತ್ತಿದೆ.

ಈ ಪ್ರಕರಣ ದೇಶಾದ್ಯಂತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಕಾರಣವಾಗಿದೆ.