ತುನೀಷ್ಯಾದ ಫುಟ್ಬಾಲ್ ಲೀಗ್ ನಲ್ಲಿ ಹಮಾಸ್ ನಾಯಕ ಯಹ್ಯಾ ಸಿನ್ವಾರ್ ಬ್ಯಾನರ್

0
396

ಸನ್ಮಾರ್ಗ ವಾರ್ತೆ

ತುನೀಷಿಯಾದ ಫುಟ್ಬಾಲ್ ಲೀಗ್ ನಲ್ಲಿ ಹಮಾಸ್ ನಾಯಕರಾಗಿದ್ದ ಯಹ್ಯಾ ಸಿನ್ವಾರ್ ಅವರ ಭಾರಿ ಗಾತ್ರದ ಬ್ಯಾನರ್ ಅನ್ನು ಪ್ರದರ್ಶಿಸಲಾಗಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಮಾಸ್ಟರ್ ಮೈಂಡ್ ಈ ಸಿನ್ವರ್ ಆಗಿದ್ದಾರೆ ಎಂದು ಹೇಳಲಾಗಿದೆ.

ಇಸ್ಮಾಯಿಲ್ ಹನಿಯ ಅವರನ್ನು ಇರಾನ್ ನಲ್ಲಿ ಇಸ್ರೇಲ್ ಹತ್ಯೆ ಮಾಡಿದ ಬಳಿಕ ಸಿನ್ವಾರ್ ಅವರು ಹಮಾಸ್ ನ ನೇತಾರರಾಗಿ ಘೋಷಿಸಲ್ಪಟ್ಟಿದ್ದರು.

2024 ಅಕ್ಟೋಬರ್ 16 ರಂದು ಇಸ್ರೇಲ್ ಸೇನೆ ಸಿನ್ವಾರ್ ಅವರನ್ನು ಹತ್ಯೆಗೈದಿತ್ತು. 2024ರ ಅರಬ್ ಪರ್ಸನಾಲಿಟಿ ಆಫ್ ದ ಇಯರ್ ಪುರಸ್ಕಾರವನ್ನು ಇದೇ ಸಿನ್ವಾರ್ ಪಡೆದಿದ್ದರು. ಈಜಿಪ್ಟಿನ ನ್ಯೂಸ್ ನೆಟ್ವರ್ಕ್ ಆಗಿರುವ ರಾಜ್ದ್ ನಡೆಸಿದ ಜನಾಭಿಪ್ರಾಯ ಸಂಗ್ರಹದಲ್ಲಿ ಯಹ್ಯಾ ಸಿನ್ವಾರ್ ಅವರನ್ನು ಈ ಪುರಸ್ಕಾರಕ್ಕೆ ಜನರು ಆಯ್ಕೆ ಮಾಡಿದ್ದರು ಈ ಜನಾಭಿಪ್ರಾಯ ಸಂಗ್ರಹದಲ್ಲಿ ಮೂರು ಲಕ್ಷ ಮಂದಿ ಭಾಗಿಯಾಗಿದ್ದರು. ಇವರಲ್ಲಿ 85 ಶೇಕಡಕ್ಕಿಂತಲೂ ಅಧಿಕ ಮಂದಿ ಸಿನ್ವಾರ್ ಅವರನ್ನು 2024ರ ವ್ಯಕ್ತಿತ್ವವಾಗಿ ಗುರುತಿಸಿದ್ದರು.