ಸನ್ಮಾರ್ಗ ವಾರ್ತೆ
ಅತ್ಯಾಧುನಿಕ ಮಿಸೈಲ್ ಗಳು, ಡ್ರೋನ್ ಗಳೂ ಸೇರಿದಂತೆ ಪ್ರಬಲ ಶಸ್ತ್ರಾಸ್ತ್ರಗಳ ಭೂಗರ್ಭ ನಗರವನ್ನೇ ಇರಾನ್ ನಿರ್ಮಿಸಿದೆ ಎಂದು ಹೇಳಲಾಗಿದೆ.
ಪರ್ಷಿಯನ್ ಮತ್ತು ಒಮಾನ್ ಸಮುದ್ರದ ನಡುವೆ ಈ ಆಯುಧಗಳ ನಗರವನ್ನು ಸೃಷ್ಟಿಸಲಾಗಿದೆ. ಇಸ್ರೇಲ್ ಮತ್ತು ಅಮೆರಿಕದ ಕಡೆಯಿಂದ ಇರಾನ್ ನ ಶಸ್ತ್ರಾಗಾರಗಳ ಮೇಲೆ ದಾಳಿ ನಡೆಯುವ ಸಾಧ್ಯತೆ ಇರುವುದರ ನಡುವೆಯೇ ಇದೀಗ ಭೂಗರ್ಭ ಶಸ್ತ್ರಾಸ್ರ ಸಂಗ್ರಹ ನಗರವನ್ನು ಸ್ಥಾಪಿಸಲಾಗಿದೆ ಎಂದು ಹೇಳಲಾಗಿದೆ.
ಕಳೆದ ವಾರ ನಡೆದ ಸೈನಿಕ ಅಭ್ಯಾಸದ ವೇಳೆ ಈ ಎರಡು ಭೂಗರ್ಭ ನಗರಗಳನ್ನು ಪ್ರದರ್ಶಿಸಲಾಗಿದೆ. ಇದರಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮಿಸೈಲ್ ಗಳು ಇವೆ. ಮಾತ್ರ ಅಲ್ಲ ಈ ಭೂಗರ್ಭ ನಗರದಲ್ಲಿ ವಿಮಾನ ನಿಲ್ದಾಣವೂ ಇದೆ. ಇಸ್ರೇಲ್ ಮತ್ತು ಅಮೆರಿಕಾದ ದಾಳಿಯನ್ನು ತಡೆದು ನಿಲ್ಲುವುದಕ್ಕೆ ಪೂರಕವಾಗಿ ಈ ಸೇನಾ ಸ್ಥಾವರವನ್ನು ಸ್ಥಾಪಿಸಲಾಗಿದೆ ಎಂದು ತಿಳಿದು ಬಂದಿದೆ.
ಎಂಥಾ ಸಂದರ್ಭದಲ್ಲೂ ನಾವು ಯುದ್ಧಕ್ಕೆ ಸಿದ್ದರಿದ್ದೇವೆ ಮತ್ತು ಅದಕ್ಕೆ ಪೂರಕ ತಯಾರಿಯನ್ನು ಮಾಡಿಕೊಂಡಿದ್ದೇವೆ ಅನ್ನುವುದನ್ನು ಶತ್ರು ರಾಷ್ಟ್ರಗಳಿಗೆ ತಿಳಿಸುವುದು ನಮ್ಮ ಸೇನಾ ಕಾರ್ಯಚರಣೆಯ ಉದ್ದೇಶವಾಗಿತ್ತು ಎಂದು ಇರಾನ್ ತಿಳಿಸಿದೆ.












