ಜನವರಿ 24, ಶುಕ್ರವಾರ ದೇರಳಕಟ್ಟೆಯಲ್ಲಿ ಕನ್ನಡದಲ್ಲಿ ಕುರ್‌ಆನ್ ಸಂದೇಶ

0
485

ಸನ್ಮಾರ್ಗ ವಾರ್ತೆ

ದೇರಳಕಟ್ಟೆ: ಜಮಾಅತೆ ಇಸ್ಲಾಮೀ ಹಿಂದ್, ಉಳ್ಳಾಲ ವತಿಯಿಂದ ಜನವರಿ 24 ರಂದು ಶುಕ್ರವಾರ, ಸಂಜೆ 7:00ಕ್ಕೆ ದೇರಳಕಟ್ಟೆಯ ಸಿಟಿ ಗ್ರೌಂಡ್ ನಲ್ಲಿ ಕನ್ನಡದಲ್ಲಿ ಕುರ್‌ಆನ್ ಸಂದೇಶ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ತೊಕ್ಕೊಟ್ಟು ಮಸ್ಟಿದುಲ್ ಹುದಾ ಖತೀಬರಾದ ಮುಹಮ್ಮದ್ ಕುಂಞಯವರು ಕನ್ನಡದಲ್ಲಿ ಕುರ್‌ಆನ್ ಪ್ರವಚನ ನೀಡಲಿದ್ದಾರೆ.

ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ, ಶ್ರೀಧಾಮ, ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಸಾನಿಧ್ಯವಿರಲಿದೆ.

ಅಖಿಲ ಭಾರತ ಕ್ರೈಸ್ತ ಒಕ್ಕೂಟದ ರಾಜ್ಯಾಧ್ಯಕ್ಷರಾರ ಶ್ರೀ ಅಶ್ವಿನ್ ಡಿ’ಸೋಜರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಸದ್ಭಾವನಾ ವೇದಿಕೆ ಉಳ್ಳಾಲ, ಇದರ ಅಧ್ಯಕ್ಷರಾದ ಶ್ರೀ ಪ್ರಸಾದ್ ರೈ ಕಲ್ಲಿಮಾರ್, ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್(ರಿ)ನ ಸ್ಥಾಪಕಾಧ್ಯಕ್ಷರಾದ ಡಾ. ಅಬ್ದುಲ್ ಶಕೀಲ್, ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಶ್ರೀ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ದೇರಳಕಟ್ಟೆ ಗ್ರೀನ್ ಗ್ರೌಂಡ್ ಮನಾರುಲ್ ಹುದಾ ಮಸೀದಿಯ ಅಧ್ಯಕ್ಷರಾದ ಜ| ಸೈಯ್ಯದ್ ಅಲಿ, ಶ್ರೀ ರವೀಂದ್ರ ರೈ ಪ್ರಶಸ್ತಿ ಪುರಸ್ಕೃತ, ಹರೇಕಳ ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ರವೀಂದ್ರ ರೈ, ಅಸೈ, ನಾಟೆಕಲ್ ರಹ್ಮಾನಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಜ। ಪಿ.ಎಮ್. ಅಬ್ಬಾಸ್ ಹಾಜಿ, ದೇರಳಕಟ್ಟೆ ಉಮರ್ ಬಿನ್ ಖತ್ತಾಬ್ ಜುಮಾ ಮಸೀದಿಯ ಅಧ್ಯಕ್ಷರಾದ ಜ। ಮುಹಮ್ಮದ್ ಯಾಸೀನ್‌ ಡಿ. ರವರ ಗೌರವ ಉಪಸ್ಥಿತಿ ಇರಲಿದೆ.