ಹೊಸದಿಲ್ಲಿ,ಮೇ 21: ಮತಗಟ್ಟೆ ಸಮೀಕ್ಷೆಯನ್ನು ನಂಬಬೇಡಿ ಕಠಿಣ ಪರಿಶ್ರಮಕ್ಕೆ ಪ್ರತಿಫಲವಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಮತಗಟ್ಟೆ ಸಮೀಕ್ಷೆಗಳು ನಿಮ್ಮನ್ನು ಉತ್ಸಾಹ ಕಳೆದುಕೊಳ್ಳುವಂತೆ ಮಾಡಲಿಕ್ಕಾಗಿ ಪ್ರಕಟಿಸಲಾಗುತ್ತಿದೆ. ಆದ್ದರಿಂದ ನೀವು ವಿಶ್ವಾಸ ಕಳಕೊಳ್ಳಬೇಡಿ ಎಂದರು.
ಮತಯಂತ್ರಗಳನ್ನು ಇಟ್ಟಿರುವ ಸ್ಟ್ರಾಂಗ್ ರೂಮ್ಗಳು ಮತ್ತು ಮತ ಎಣಿಕೆ ಕೇಂದ್ರಗಳಲ್ಲಿ ಎಚ್ಚರಿಕೆ ಪಾಲಿಸಬೇಕು. ನಮ್ಮ ಕಠಿಪರಿಶ್ರಮಕ್ಕೆ ಫಲ ಸಿಗಲಿದೆ ಎನ್ನುವ ಧ್ವನಿ ಮುದ್ರಿತ ಸಂದೇಶವನ್ನು ಪ್ರಿಯಾಂಕಾ ಕಳುಹಿಸಿದ್ದಾರೆ. ಬಿಜೆಪಿಗೆ ಬಹುಮತ ಸಿಕ್ಕಿ ಅಧಿಕಾರದಲ್ಲಿ ಮುಂದುವರಿಯಲಿದೆ ಎನ್ನುವ ಮತಗಟ್ಟೆ ಸಮೀಕ್ಷೆ ಹೊರ ಬಂದದ್ದರಿಂದ ಪ್ರಿಯಾಂಕಾ ಕಾಂಗ್ರೆಸ್ ಕಾರ್ಯಕರ್ತರನ್ನು ಪ್ರಿಯಾಂಕಾ ಸಂತೈಸಿದ್ದಾರೆ. ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.












