ಮಧ್ಯಪ್ರಾಚ್ಯದಲ್ಲಿ ಶೀಘ್ರದಲ್ಲೇನು ಯುದ್ಧ ನಡೆಯುವುದಿಲ್ಲ: ಇರಾನ್

0
368

ಟೆಹ್ರಾನ್,ಮೇ 21: ಮಧ್ಯಪ್ರಾಚ್ಯದಲ್ಲಿ ಬೇಗನೆ ಯುದ್ಧ ಸ್ಫೋಟಗೊಳ್ಳುವುದಿಲ್ಲ ಎಂಬ ನಂಬಿಕೆ ನಮಗಿದೆ. ಯುದ್ಧದಲ್ಲಿ ನಮಗೆ ವಿಶ್ವಾಸವಿಲ್ಲ. ನಾವು ಯುದ್ಧವನ್ನು ಬಯಸುವುದೂ ಇಲ್ಲ. ಯುದ್ಧದ ಮೂಲಕ ಇರಾನನ್ನು ಇಲ್ಲದಂತಾಗಿಸಲು ಯಾರಾದರೂ ಬಯಸಿದರೆ ಅದೊಂದು ಮಿಥ್ಯ ಭಾವನೆಯಾಗಿದೆ ಎಂದು ಇರಾನ್ ವಿದೇಶ ಸಚಿವ ಮುಹಮ್ಮದ್ ಜವಾದ್ ಸಾರಿಫ್ ಹೇಳಿದರು.

ಚೀನಾ ಸಂದರ್ಶನದ ಸಮಯದಲ್ಲಿ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಇರಾನ್ ಮತ್ತು ಅಮೆರಿಕದ ನಡುವಿನ ಘರ್ಷಣಾ ಸ್ಥಿತಿಯನ್ನು ಕೊನೆಗೊಳಿಸುವ ಪ್ರಯತ್ನದ ಭಾಗವಾಗಿ ಅವರು ಚೀನಾಕ್ಕೆ ಭೇಟಿ ನೀಡಿದ್ದು ಈ ಹಿಂದೆ ಇರಾನಿನ ಅಣು ಒಪ್ಪಂದ ಬಗ್ಗೆ ಚೀನಾ ಮತ್ತು ರಷ್ಯಾ ಸ್ಥಿರ ನಿಲುವು ತಳೆಯಬೇಕೆಂದು ಸಾರಿಫ್ ಹೇಳಿಕೆ ನೀಡಿದ್ದರು.