ಸನ್ಮಾರ್ಗ ವಾರ್ತೆ
ಪದವಿ ಕಾಲೇಜಿನ IQAC ಮತ್ತು ಕಾಮರ್ಸ್ ಅಸ್ಸೊಸಿಯೇಷನ್ ನ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗಾಗಿ ‘ವ್ಯಾಪಾರ ವ್ಯವಹಾರದ ಮೂಲಕ ಮಹಿಳಾ ಸಬಲೀಕರಣ’ ಎಂಬ ವಿಷಯದಲ್ಲಿ ಕಾರ್ಯಾಗಾರವನ್ನು ನಡೆಸಲಾಯಿತು. ಸಂಪನ್ಮೂಲ ಅತಿಥಿಗಳಾಗಿ ಮಂಗಳೂರಿನ ಉದ್ಯಮಿ ಗೋಲ್ಡ್ ಸೂಕ್ ಇದರ ಪಾಲುದಾರ ಹಾಗೂ ರಿಫಾ ಚೇಂಬರ್ ಆಫ್ ಕಾಮರ್ಸ್ ದ.ಕ. ಜಿಲ್ಲೆಯ ಉಪಾಧ್ಯಕ್ಷರಾದ ಜನಾಬ್ ಆಸಿಫ್ ಇಕ್ಬಾಲ್ ಮತ್ತು ಯುವ ಉದ್ಯಮಿ, ಸ್ಟಾಕ್ ಮಾರ್ಕೆಟ್ ಮತ್ತು ಮ್ಯೂಚುವಲ್ ಫಂಡ್ ವ್ಯರಹಾರಗಳ ಪರಿಣಿತ ಜನಾಬ್ ಸಲಹುದ್ದೀನ್ ಮಂಗಳೂರು ಆಗಮಿಸಿದ್ದರು.

ವಿದ್ಯಾರ್ಥಿ ಜೀವನದಲ್ಲಿಯೇ ಉಳಿತಾಯ ಮತ್ತು ಸಣ್ಣ ಮಟ್ಟಿನ ವ್ಯಾಪಾರ ಮತ್ತು ವ್ಯವಹಾರಗಳನ್ನು ಮಾಡಲು ಹೇಗೆ ಸಾಧ್ಯವಿದೆ ಮತ್ತು ಅದಕ್ಕೆ ಇರುವ ಅವಕಾಶಗ ಬಗ್ಗೆ ಮಾಹಿತಿ ನೀಡುವುದರೊಂದಿಗೆ ವಿದ್ಯಾರ್ಥಿಗಳ ಜೊತೆಗೆ ನಡೆಸಿದ ಸಂವಾದದಲ್ಲಿ ಅವರ ಪ್ರಶ್ನೆ ಮತ್ತು ಸಂಶಯಗಳಿಗೆ ಪರಿಹಾರಗಳನ್ನು ಸೂಚಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಕ್ಷ ಜನಾಬ್ ಯಾಸೀನ್ ಬೇಗ್, ಖಜಾಂಜಿ ಹೈದರ್ ಅಲಿ, ಪ್ರಾಂಶುಪಾಲೆ ಡಾ. ಹೇಮಲತಾ, ವಾಣಿಜ್ಯ ಸಂಘದ ಕಾರ್ಯದರ್ಶಿ ತೃತೀಯ ಬಿ.ಕಾಮ್ ನ ಅಫ್ನ ಸೇರಿ ಪದವಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಭಾಗವಹಿಸಿದ್ದರು. ಪ್ರಥಮ ಬಿ.ಕಾಮ್ ನ ಕುIಆಕಿಫಾ ಕರೀದ ಕಿರಾತ್ ಪಠಿಸಿ ಅಂತಿಮ ಬಿ.ಕಾಮ್ ನ ಕು I ಸುರಯ್ಯನವರು ಧನ್ಯವಾದ ಸಮರ್ಪಿಸಿ, ದ್ವಿತೀಯ ಬಿ ಕಾಮ್ ನ ಕುI ಮಶೀದ ಕಾರ್ಯಕ್ರಮವನ್ನು ನಿರೂಪಿಸಿದರು.












