ಬರಕಃ ಕಾಲೇಜಿನಲ್ಲಿ 45 ದಿನಗಳ ನೀಟ್ / ಸಿಇಟಿ ಕ್ರ್ಯಾಶ್ ಕೋರ್ಸ್ ಆಯೋಜನೆ

0
346

ಸನ್ಮಾರ್ಗ ವಾರ್ತೆ

ಬರಕಃ ಇಂಟರ್ನ್ಯಾಷನಲ್ ಶಾಲೆ ಮತ್ತು ಕಾಲೇಜಿನಲ್ಲಿ ಪಿ ಯು ಸಿ ವಿದ್ಯಾರ್ಥಿಗಳಿಗೆ ಅವರ ಉನ್ನತ ವ್ಯಾಸಂಗಕ್ಕೆ ನೆರವಾಗಲು ನೀಟ್ / ಸಿಇಟಿ ಕ್ರ್ಯಾಶ್ ಕೋರ್ಸ್ ಆಯೋಜಿಸಲಾಗಿದೆ . 45 ದಿನಗಳ ಕಾಲ ನಡಯುವ ಈ ತರಬೇತಿ ಕೋರ್ಸ್ ಮಾರ್ಚ್ 22 ರಿಂದ ಆರಂಭಗೊಂಡು ಮೇ 3 ನೇ ತಾರೀಕಿನ ವರೆಗೆ ನಡೆಯಲಿದೆ. ನೀಟ್ / ಸಿಇಟಿ ಕ್ರ್ಯಾಶ್ ಕೋರ್ಸ್ ನಲ್ಲಿ ನುರಿತ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ.

ಭಾಗವಹಿಲಿಚ್ಚಿಸುವ ವಿದ್ಯಾರ್ಥಿಗಳು ಮಾರ್ಚ್ 19 ನೇ ತಾರೀಕು ಸಂಜೆ 4 ಗಂಟೆಯಾ ಒಳಗೆ ಬರಕಃ ಶಾಲೆಗೆ ಅರ್ಜಿ ಸಲ್ಲಿಸಬೇಕಾಗಿದೆ.

ವಿದ್ಯಾರ್ಥಿಗಳಿಗೆ ಬರಕಃ ವಿದ್ಯಾ ಸಂಸ್ಥೆಯಲ್ಲಿ ಮಾರ್ಚ್ 21 ರಂದು ಬೆಳಿಗ್ಗೆ 9 ಗಂಟೆಗೆ ಅರ್ಹತಾ ಪರೀಕ್ಷೆಯನ್ನು ಇಡಲಾಗಿದೆ. ಅದೇ ದಿನ 11:30ಕ್ಕೆ ಅರ್ಹತಾ ಪರೀಕ್ಷೆಯ ಫಲಿತಾಂಶವನ್ನು ಪ್ರಕಿಸಲಾಗುವುದು. ಆಸಕ್ತ ಪೋಷಕರು ಮತ್ತು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲು ನಸೀಮ್ 9845112379 ಇಮೇಲ್: [email protected] ನ್ನು ಸಂಪರ್ಕಿಸಬಹುದಾಗಿದೆ.

ಕೆಲವೇ ವಿದ್ಯಾರ್ಥಿಗಳಿಗೆ ಅವಕಾಶ ಇರುವುದರಿಂದ ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು.

ಬರಕಾ ಇಂಟರ್ನ್ಯಾಷನಲ್ ಸ್ಕೂಲ್ & ಕಾಲೇಜು,
ಅಡ್ಯಾರ್, ಮಂಗಳೂರು -575007