ಹೋಲಿ: ಉತ್ತರ ಪ್ರದೇಶದ 70 ಮಸೀದಿಗಳಿಗೆ ಟಾರ್ಪಾಲಿನ್ ಹೊದಿಸಿದ ಜಿಲ್ಲಾಡಳಿತ

0
1710

ಸನ್ಮಾರ್ಗ ವಾರ್ತೆ

ಹೋಲಿ ಆಚರಣೆಗೆ ಮುಂಚಿತವಾಗಿ 70 ಮಸೀದಿಗಳನ್ನು ಉತ್ತರ ಪ್ರದೇಶದ ಶಾಯಿ ಯಾನ್ ಪುರ್ ಜಿಲ್ಲೆಯ ಆಡಳಿತವು ಟಾರ್ಪಲಿನಿಂದ ಮುಚ್ಚಿದೆ. ಹೋಲಿ ಆಚರಣೆಯ ಭಾಗವಾಗಿ ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ಮಸೀದಿಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳುವುದಕ್ಕಾಗಿ ಹೀಗೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಈ ಜಿಲ್ಲೆಯ ಧಾರ್ಮಿಕ ನಾಯಕರೊಂದಿಗೆ ಮಾತುಕತೆಯನ್ನು ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಹೋಲಿ ಆಚರಣೆಯ ಭಾಗವಾಗಿ ಶಾಹಿಹಾನ್ಪುರ್ ಜಿಲ್ಲೆಯಲ್ಲಿ ಜೂಟ್ಟ ಮಾರ್ ಹೋಲಿ ಎಂಬ ಹೆಸರಲ್ಲಿ ಸಾವಿರಾರು ಮಂದಿ ಭಾಗವಹಿಸುವ ಘೋಷ ಯಾತ್ರೆ ನಡೆಯಲಿದೆ. ಈ ಪ್ರದೇಶದಲ್ಲಿ ಅತ್ಯಂತ ಭಿನ್ನ ಹೋಲಿ ಆಚರಣೆಯಾಗಿ ಇದು ಗುರುತಿಸಿಕೊಂಡಿದೆ ಎಂದು ತಿಳಿದುಬಂದಿದೆ. ಸುಮಾರು ಹತ್ತು ಕಿಲೋಮೀಟರ್ ತನಕ ಈ ಘೋಷಯಾತ್ರೆ ಸಾಗಲಿದೆ. ಈ ಘೋಷಾ ಯಾತ್ರೆಯ ಸಂದರ್ಭದಲ್ಲಿ ದುಷ್ಕರ್ಮಿಗಳು ತೊಂದರೆ ಕೊಡಬಾರದೆಂಬ ಕಾರಣಕ್ಕಾಗಿ ಯಾತ್ರೆ ಸಾಗುವ ದಾರಿಯಲ್ಲಿರುವ ಮಸೀದಿಗಳಿಗೆ ಟಾರ್ಪಲನ್ನು ಹೊದಿಸಲಾಗಿದೆ. ಈ ಮೂಲಕ ಮಸೀದಿಗಳಿಗೆ ಬಣ್ಣ ಎರಚುವುದನ್ನು ತಡೆಯಬಹುದಾಗಿದೆ ಎಂದು ಜಿಲ್ಲಾಡಳಿತ ಸಮರ್ಥನೆ ನೀಡಿದೆ.