ಸನ್ಮಾರ್ಗ ವಾರ್ತೆ
ಮಸ್ಜಿದುಲ್ ಹರಾಮ್ನಲ್ಲಿ ಮತ್ತು ಪರಿಸರದಲ್ಲಿ ಯಾವುದಕ್ಕೆಲ್ಲ ನಿಷೇಧ ಇದೆ ಅನ್ನುವ ಪಟ್ಟಿಯನ್ನ ಬಿಡುಗಡೆಗೊಳಿಸಲಾಗಿದೆ. ಯಾತ್ರಿಕರು ಮತ್ತು ವಿಶ್ವಾಸಿಗಳಲ್ಲಿ ಸುರಕ್ಷತೆಯ ಭಾವವನ್ನ ಮೂಡಿಸುವುದು, ರಮಝಾನ್ ತಿಂಗಳ ಅವಧಿಯಲ್ಲಿ ಆರಾಧನೆಗೆ ಹೆಚ್ಚು ಸೌಕರ್ಯವನ್ನ ಒದಗಿಸಿಕೊಡುವುದು ಇತ್ಯಾದಿಗಳ ಭಾಗವಾಗಿ ಈ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
ಮಸ್ಜಿದುಲ್ ಹರಾಂನಲ್ಲಿ ಅಥವಾ ಪರಿಸರದಲ್ಲಿ ಧೂಮಪಾನ ಮಾಡುವುದೋ ಅದರ ಮಾರಾಟ ಮಾಡುವುದೋ ಮಾಡಬಾರದು. ಬಿಕ್ಷಾಟನೆ ಮಾಡುವುದು ಕೂಡ ಅಪರಾಧ ಎಂದು ಹೇಳಲಾಗಿದೆ.
ಆಯುದಗಳನ್ನು ಮತ್ತು ಹರಿತ ಉಪಕರಣಗಳನ್ನು ಕೊಂಡೊಯ್ಯುವುದಕ್ಕೆ ಅವಕಾಶವಿಲ್ಲ. ಹರಂಗೆ ಸಂಬಂಧಪಟ್ಟ ಸ್ಥಳಗಳಿಗೆ ಬೈಕ್ ಅಥವಾ ಸೈಕಲ್ ತರುವುದಕ್ಕೂ ಅವಕಾಶವಿಲ್ಲ. ಲಗೇಜ್ಗಳೊಂದಿಗೆ ಹರಮ್ಗೆ ಪ್ರವೇಶಿಸಬಾರದು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.












