ಮಕ್ಕ: ಜಿಸಿಸಿ ಸಭೆಯಲ್ಲಿ ಭಾಗವಹಿಸುವಂತೆ ಕತರ್ ಅಮೀರ್‍ ಗೆ ಆಹ್ವಾನ ನೀಡಿದ ಸೌದಿ ದೊರೆ

0
763

ದೋಹ, ಮೇ 28: ಮಕ್ಕದಲ್ಲಿ ಮೇ 30ಕ್ಕೆ ನಡೆಯುವ ಗಲ್ಫ್ ಸಹಕಾರಿ ಕೌನ್ಸಿಲ್( ಜಿಸಿಸಿ)ನ ತುರ್ತು ಸಭೆಯಲ್ಲಿ ಪಾಲ್ಗೊಳ್ಳುವಂತೆ ಕತರ್ ಅಮೀರ್ ರನ್ನು ಸೌದಿ ಅರೇಬಿಯದ ದೊರೆ ಸಲ್ಮಾನ್ ಆಹ್ವಾನಿಸಿದ್ದಾರೆ. ಕತರ್ ಅಮೀರ್ ಶೇಖ್ ತಮೀಂ ಬಿನ್ ಹಮದ್ ಅಲ್ತಾನಿಯವರಿಗೆ ಸೌದಿ ದೊರೆಯ ಆಮಂತ್ರಣ ಸಿಕ್ಕಿದೆ ಎಂದು ಕತರ್ ಉಪಪ್ರಧಾನಿ, ವಿದೇಶ ಸಚಿವ ಶೇಖ್ ಮುಹಮ್ಮದ್ ಬಿನ್ ಅಬ್ದುರ್ರಹ್ಮಾನ್ ಅಲ್ತಾನ್ತಾನಿ ಪತ್ರಿಕಾ ಹೇಳಿಕೆ ನೀಡಿದರು.

ಈ ವಿಷಯವನ್ನು ಕತರ್ ಸುದ್ದಿ ಸಂಸ್ಥೆ ಕ್ಯೂ ಎನ್ ಎ ದೃಢೀಕರಿಸಿದೆ. ಅಲ್‍ಜಝೀರ ಸೌದಿ ದೊರೆಯ ಆಮಂತ್ರಣದ ಕುರಿತು ವರದಿ ಪ್ರಸಾರ ಮಾಡಿತ್ತು. ಕಳೆದ ದಿವಸ ದೋಹದಲ್ಲಿ ನಡೆದ ಜಿಸಿಸಿ ಕಾರ್ಯದರ್ಶಿ ಜನರಲ್ ಅಬ್ದುಲ್ಲತೀಫ್ ಬಿನ್ ರಾಷಿದ್ ಅಲ್ ಸಯಾನಿಯವರೊಂದಿಗೆ ಭೇಟಿಯ ವೇಳೆ ಕತರ್ ಅಮೀರ್‍ ಗೆ ಆಹ್ವಾನವನ್ನು ಪ್ರಧಾನ ಮಂತ್ರಿ ಸ್ವೀಕರಿಸಿದರು.

2017 ರಿಂದ ಸೌದಿ, ಈಜಿಪ್ಟ್, ಬಹ್ರೈನ್, ಯುಎಒ ದೇಶಗಳು ಕತರ್ ವಿರುದ್ಧ ದಿಗ್ಬಂದನ ಹೇರಿವೆ. ದಿಗ್ಬಂಧನ ಎರಡನೆ ವರ್ಷಕ್ಕೆ ದಾಟಿದ್ದು ಇದೇವೇಳೆ ಕತರ್ ಅಮೀರ್‍ ಗೆ ಸೌದಿ ದೊರೆ ಆಮಂತ್ರಣ ನೀಡಿದ್ದು ಕುತೂಹಲಕ್ಕೆ ಕಾರಣವಾಗಿದೆ.