ಯುಇಎ: ರೋಹಿಂಗ್ಯನ್ ನಿರಾಶ್ರಿತರಿಗಾಗಿ ಎರಡು ದಿನಗಳಲ್ಲಿ ನಾಲ್ಕು ಕೋಟಿ ದಿರ್‍ಹಂ ಸಂಗ್ರಹ

0
584

ಅಬುಧಾಬಿ, ಮೇ 27: ರೋಹಿಂಗ್ಯನ್ ನಿರಾಶ್ರಿತರಿಗಾಗಿ ದೇಶವ್ಯಾಪಿ ನಡೆಸಿದ ಅಭಿಯಾನದಲ್ಲಿ ಎರಡನೆ ದಿನ ಶನಿವಾರ 40,159,814 ದಿರ್‍ಹಂ ಸಂಗ್ರಹವಾಗಿದೆ. ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದ ಹತ್ತು ಲಕ್ಕಕ್ಕೂ ಅಧಿಕ ರೋಹಿಂಗ್ಯನ್ ನಿರಾಶ್ರಿತರಿಗೆ ಆಹಾರ, ಚಿಕಿತ್ಸೆ, ಶುದ್ಧನೀರು, ಶಿಕ್ಷಣ, ಮನೆ ಇತ್ಯಾದಿ ಒದಗಿಸಲು ಯುಇಎ ಅಧ್ಯಕ್ಷ ಶೇಖ್ ಖಲೀಫ ಬಿನ್ ಝಾಯಿದ್ ಅಲ್ ನಹ್ಯಾನ್‍ರ ಸೂಚನೆ ಪ್ರಕಾರ ರೋಹಿಂಗ್ಯನ್ ಮಕ್ಕಳು ಮಹಿಳೆಯರಿಗಾಗಿ ಯುಎಇ ಎಂಬ ಅಭಿಯಾನ ನಡೆಸಲಾಗುತ್ತಿದ್ದು ಸಂಬಂಧಿಸಿದ ಕಾರ್ಯಕ್ರಮ ಸಂಜೆ ನಾಲ್ಕರಿಂದ ರಾತ್ರೆ ಏಳು ಗಂಟೆಯವರೆಗೆ ವಿವಿಧ ಟಿವಿ ಚ್ಯಾನೆಲ್‍ಗಳು ಪ್ರಸಾರ ಮಾಡುತ್ತಿದೆ. ಅಭಿಯಾನ ಎರಡು ವಾರಗಳ ಕಾಲ ನಡೆಯಲಿದೆ.

ಯುಎಇ ಉಪಾಧ್ಯಕ್ಷ, ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಂ, ಅಬುಧಾಬಿ ಉತ್ತರಾಧಿಕಾರಿ ಯುಎಇ ಸಶಸ್ತ್ರ ಪಡೆಯ ಸುಪ್ರೀಂ ಕಮಾಂಡರ್ ಶೇಖ್ ಮುಹಮ್ಮದ್ ಬಿನ್ ಝಾಯಿದ್ ಅಲ್ ನಹ್ಯಾನ್, ದಫ್ರ ಪ್ರತಿನಿಧಿ ಎಮಿರೇಟ್ಸ್ ರೆಡ್‍ಕ್ರಸೆಂಟ್ ಅಧ್ಯಕ್ಷ ಶೇಖ್ ಹಂದಾನ್ ಬಿನ್ ಝಾಯಿದ್ ಅಲ್ ನಹ್ಯಾನ್‍ರ ಬೆಂಬಲದಲ್ಲಿ ಅಭಿಯಾನ ಮುಂದುವರಿಯುತ್ತಿದೆ.