32 ಮದರಸ ಮಕ್ಕಳನ್ನು 14 ಗಂಟೆಗಳ ಕಾಲ ಅನ್ನ ನೀರು ಕೊಡದೆ ಕೂಡಿಟ್ಟ ಬಿಹಾರದ ರೈಲ್ವೆ ಪೊಲೀಸರು

0
928

ಸನ್ಮಾರ್ಗ ವಾರ್ತೆ

32 ಮುಸ್ಲಿಂ ಮಕ್ಕಳು ಮತ್ತು ಅವರ ಹೆತ್ತವರನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಬಿಹಾರದಲ್ಲಿ 14 ಗಂಟೆಗಳ ಕಾಲ ಬಂಧಿಸಿಟ್ಟದ್ದು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಈ ಮಕ್ಕಳು ಇಸ್ಲಾಮಿಕ್ ರೀತಿಯ ಉಡುಪನ್ನು ಧರಿಸಿದ್ದು ಗುಜರಾತ್‌ನ ಸೂರತ್‌ನಲ್ಲಿರುವ ಝಕರಿಯ ಮದ್ರಸಕ್ಕೆ ಹೋಗುವುದಕ್ಕಾಗಿ ಮೊಕಾಮ ರೈಲ್ವೆ ಸ್ಟೇಷನ್‌ನಲ್ಲಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ.

ಸುಮಾರು 14 ಗಂಟೆಗಳ ಕಾಲ ಈ ಮಕ್ಕಳನ್ನು ಇರಿಸಿಕೊಂಡ ಪೊಲೀಸರು ಬಳಿಕ ಸ್ಥಳೀಯ ಜನರ ಪ್ರತಿಭಟನೆಯ ಬಳಿಕ ಬಿಟ್ಟುಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಕ್ಕಳಿಗೆ ನೀರು ಆಹಾರ ಏನನ್ನೂ ಕೊಡದೆ 14 ಗಂಟೆಗಳ ಕಾಲ ಕಷ್ಟಡಿಯಲ್ಲಿ ಪೊಲೀಸರು ಇರಿಸಿದ್ದಾರೆ ಮತ್ತು ಹೊರಗಿನ ಯಾರನ್ನೂ ಸಂಪರ್ಕಿಸುವುದಕ್ಕೆ ಬಿಡಲಿಲ್ಲ ಎಂದು ತಿಳಿದು ಬಂದಿದ್ದು ತೀವ್ರ ಅಕ್ಷೇಪಕ್ಕೆ ಕಾರಣವಾಗಿದೆ.

ಈ ಮಕ್ಕಳು ಅಪ್ರಾಪ್ತರೆಂಬುದು ಪೊಲೀಸರಿಗೆ ಗೊತ್ತಿದೆ. ಆದರೆ ಪೈಜಾಮ ಮತ್ತು ಬಿಳಿ ಟೋಪಿಯನ್ನು ಧರಿಸಿರುವುದೇ ಅವರನ್ನು ಈ ರೀತಿಯಾಗಿ ನಡೆಸಿಕೊಳ್ಳುವುದಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಆದರೆ ಬಾಲ ಕಾರ್ಮಿಕತೆಗೆ ಈ ಮಕ್ಕಳನ್ನು ಕೊಂಡೊಯ್ಯುತ್ತಿದ್ದಾರೆ ಎಂಬ ಅನುಮಾನದಿಂದಾಗಿ ಇವರನ್ನು ಹೀಗೆ ಕಷ್ಟಡಿಯಲ್ಲಿ ಇರಿಸಲಾಗಿತ್ತು ಎಂದು ಪೊಲೀಸರು ವಾದಿಸಿದ್ದಾರೆ. ಆದರೆ ಪೊಲೀಸರು ಸುಳ್ಳು ಹೇಳುತ್ತಿದ್ದಾರೆ, ವಿದ್ಯಾರ್ಥಿಗಳ ಐಡಿ ಕಾರ್ಡ್ ಮತ್ತು ಮದರಸ ಪ್ರವೇಶದ ಸರ್ಟಿಫಿಕೇಟುಗಳನ್ನು ನಾವು ತೋರಿಸಿದರೂ ಅವರು ಕೇಳಲಿಲ್ಲ. ಮಾತ್ರ ಅಲ್ಲ ಈ ವಿದ್ಯಾರ್ಥಿಗಳ ಹೆತ್ತವರನ್ನು ಕೂಡ ಪೊಲೀಸರು ಕಷ್ಟಡಿಗೆ ತೆಗೆದುಕೊಂಡರು ಎಂದು ಸ್ಥಳೀಯರು ಹೇಳಿದ್ದಾರೆ.