ಸನ್ಮಾರ್ಗ ವಾರ್ತೆ
ಫ್ರಾನ್ಸ್ ಮಸೀದಿಯೊಂದರಲ್ಲಿ ಚೂರಿ ಇರಿತಕ್ಕೆ ಒಳಗಾಗಿ ಹತ್ಯೆಗೀಡಾದ ಅಬೂಬಕ್ಕರ್ ಸಿಸ್ ಎಂಬುವರಿಗೆ ಫ್ರಾನ್ಸ್ ಪಾರ್ಲಿಮೆಂಟ್ ಒಂದು ನಿಮಿಷ ಶೋಕಾಚಾರಣೆ ನಡೆಸಿದೆ. ಈ ಹತ್ಯೆಯನ್ನು ಹೇಡಿತನದ ಕೃತ್ಯ ಮತ್ತು ದೇಶವನ್ನು ಆಘಾತಕ್ಕೆ ಒಳಗಾಗಿಸಿದ ಕೃತ್ಯ ಎಂದು ಪಾರ್ಲಿಮೆಂಟ್ ನ ಅಧ್ಯಕ್ಷರು ಹೇಳಿದ್ದಾರೆ.
ಇದಕ್ಕಿಂತ ಮೊದಲು ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಇಸ್ಲಾಮಿ ಫೋಬಿಯಾದ ವಿರುದ್ಧ ನೂರಾರು ಮಂದಿ ಪ್ರತಿಭಟಿಸಿದ್ದರು. ಮುಸ್ಲಿಮರ ಮೇಲೆ ಹಿಂಸಾಚಾರ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು. ಈ ಪ್ರತಿಭಟನೆಯಲ್ಲಿ ಸರಕಾರೇತರ ಸಂಸ್ಥೆಗಳು, ರಾಜಕಾರಣಿಗಳು ಮತ್ತು ಧಾರ್ಮಿಕ ನಾಯಕರು ಭಾಗವಹಿಸಿದ್ದರು.
ಚೂರಿ ಇರಿದವನನ್ನು ಒಲಿವರ್ ಎಂದು ಗುರುತಿಸಲಾಗಿದ್ದು ಈತ ಬೋಸ್ನಿಯನ್ ಮೂಲದವನಾಗಿದ್ದಾನೆ . ಈತ ಇಟಲಿಯಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ. ಈತನನ್ನು ಶೀಘ್ರವೇ ಫ್ರಾನ್ಸಿಗೆ ಗಡಿಪಾರು ಮಾಡಲಾಗುವುದು ಎಂದು ತಿಳಿದುಬಂದಿದೆ.
ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದ ವೇಳೆ 24 ವರ್ಷದ ಮಾಲಿಯ ಪ್ರಜೆಅಬೂಬಕ್ಕರ್ ಅವರನ್ನು 40 ರಿಂದ 50 ಬಾರಿ ಇರಿದು ಈತ ಸಾಯಿಸಿದ್ದ.












