ಸನ್ಮಾರ್ಗ ವಾರ್ತೆ
ಅಹ್ಮದಾಬಾದ್ನಲ್ಲಿ ಪತನಗೊಂಡ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಭೂಮಿ ಚೌಹಾಣ್ ಎಂಬ ಯುವತಿ ಇದೀಗ ಜೀವ ಮರಳಿ ದಕ್ಕಿದ ಆನಂದದಲ್ಲಿದ್ದಾರೆ. ಟ್ರಾಫಿಕ್ ಜಾಮ್ನಿಂದಾಗಿ ಅವರಿಗೆ ವಿಮಾನ ನಿಲ್ದಾಣಕ್ಕೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗಿರಲಿಲ್ಲ. 10 ನಿಮಿಷ ತಡವಾಗಿ ಆಕೆ ವಿಮಾನ ನಿಲ್ದಾಣ ತಲುಪಿದ್ದಳು. ಆದರೆ ಅಧಿಕಾರಿಗಳು ಆಕೆಗೆ ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸಲು ಅವಕಾಶ ಕೊಡಲಿಲ್ಲ. ಬಾರಿ ಬಾರಿ ವಿನಂತಿಸಿದರೂ ವಿಮಾನ ಪ್ರವೇಶಿಸುವ ಅವಕಾಶ ಲಭ್ಯವಾಗಿರಲಿಲ್ಲ ಒಂದು ವೇಳೆ ತಾನು ಸಮಯಕ್ಕೆ ಸರಿಯಾಗಿ ತಲುಪಿದ್ದರೆ ಮೃತಪಟ್ಟವರ ಪಟ್ಟಿಯಲ್ಲಿ ಇರುತ್ತಿದ್ದೆ ಎಂದಾಕೆ ಹೇಳಿದ್ದಾರೆ.
ಲಂಡನಿಗೆ ಹೋಗಲು ಅವಕಾಶ ಇಲ್ಲ ಎಂಬುದನ್ನು ಅರಿತು ನಿರಾಶೆಯಿಂದ ವಿಮಾನ ನಿಲ್ದಾಣದಿಂದ ಹೊರಬಂದ ಭೂಮಿ ಚೌಹಾನ್ ಗೆ ಭಾರೀ ಸ್ಫೋಟದ ಶಬ್ದ ಕೇಳಿಸಿತು. ನನ್ನ ದೇಹ ನಡುಗುತ್ತಿತ್ತು . ನನಗೆ ಮಾತಾಡಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಈಗಲೂ ನಾನು ಪೂರ್ಣ ಚೇತರಿಕೆಯನ್ನು ಪಡೆದಿಲ್ಲ ಎಂದು ಭೂಮಿ ಚೌಹಾನ್ ಹೇಳಿದ್ದಾರೆ.
ಈಕೆ ತನ್ನ ಗಂಡನ ಜೊತೆ ಲಂಡನ್ನಿನಲ್ಲಿ ವಾಸಿಸುತ್ತಿದ್ದರು. ರಜಾಕಾಲವನ್ನು ಕಳೆಯುವುದಕ್ಕಾಗಿ ಅವರು ಭಾರತಕ್ಕೆ ಬಂದಿದ್ದರು.












